ಚಾಮರಾಜನಗರ: ವ್ಯವಸಾಯ ಮಾಡಲು ಜಮೀನಿಗೆ ತೆರಳುವ ರೈತರ ತಲೆಗೆ ವಿದ್ಯುತ್ ಕಂಬದ ತಂತಿಗಳು ತಾಗುತ್ತಿರುವ ಘಟನೆ ಪಳನಿಮೇಡು ಗ್ರಾಮದಲ್ಲಿ ನಡೆದಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಳನಿಮೇಡು ಗ್ರಾಮದ ಬಸವರಾಜು, ಸಿದ್ದಶೆಟ್ಟಿ ಎಂಬುವವರಿಗೆ ಸೇರಿದಂತಹ ಜಮೀನಿನಲ್ಲಿ ವಿದ್ಯುತ್ ವೈರ್ ಗಳು ತುಂಬಾ ಕೆಲ ಅಂತದಲ್ಲಿರುವ ಪರಿಣಾಮ ಜಮೀನಿನಲ್ಲಿ ರೈತರು ತುಂಬಾ ಆತಂಕದಲ್ಲಿ ವ್ಯವಸಾಯದಲ್ಲಿ ತೊಡಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ವರ್ಷಗಳಿಂದಲ್ಲೂ ಸಹ ಈ ಬಗ್ಗೆ ಚೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಯಾವುದಾದರೂ ಅನಾಹುತಗಳು ಸಂಭವಿಸಿದ್ದಲ್ಲಿ ಚೆಸ್ಕಾಂ ಅಧಿಕಾರಿಗಳೆ ಹೊಣೆ ಎಂದು ಈ ಭಾಗದ ರೈತರು ಎಚ್ಚರಿಕೆಯನ್ನು ನೀಡಿದ್ದಾರೆ.