ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಬೈಲುಕೊಪ್ಪ 66/11 KV ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹಾಗೂ ಕಂಪಲಾಪುರ 66/11 KV ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 17 ರಂದು ಎರಡನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೈಲುಕುಪ್ಪೆ ಮತ್ತು ಕಂಪಲಾಪುರ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜುಗೋಳ್ಳುವ ಚಿಲ್ಕುಂದ, ಚೆನಕಾವಲು , ಕೊಪ್ಪ, ನವಿಲೂರು, ಹುಣಸವಾಡಿ, ಆವರ್ತಿ, ಪುನಾಡಹಳ್ಳಿ, ಕಂಪ್ಲಾಪುರ, ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮತ್ತು ಟಿಬೆಟ್ ಕ್ಯಾಂಪ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪಿರಿಯಾಪಟ್ಟಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರು ಬಸವರಾಜಸ್ವಾಮಿ ತಿಳಿಸಿದ್ದಾರೆ.