ಮೈಸೂರು: ವಿ.ವಿ ಮೊಹಲ್ಲಾ ವಿಭಾಗ ವ್ಯಾಪ್ತಿಯ ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ, ಮೇಟಗಳ್ಳಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ೨ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ಸೆಪ್ಟೆಂಬರ್ ೨೨ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಪ್ರದೇಶಗಳು:- ಕೂರ್ಗಳ್ಳಿ ಕೈಗಾರಿಕಾ ಪ್ರದೇಶ, ಎಕ್ಸೆಲ್ ಪಬ್ಲಿಕ್ ಶಾಲೆ, ವಿನ್ಯಾಸ್, ಕೂರ್ಗಳ್ಳಿ ಕೆರೆ ಸುತ್ತಮುತ್ತ, ಗೋಪಾಲನ್ ಕಾಂಪೌಂಡ್, ವಿಪ್ರೋ, ಮೆರಿಟಾರ್, ಪಟ್ಟಾಬಿ ಎಂಟರ್ ಪ್ರೆಸಸ್, ಮಿಲೆನಿಯಮ್, ಎಲ್ & ಟಿ, ಮಾರ್ಕ್ ಬ್ಯಾಟರಿಸ್ ರಸ್ತೆ, ಚಾಮುಂಡಿ ಸಿಲ್ಕ್ಸ್ ಹಾಗೂ ಸುತ್ತ ಮುತ್ತಲಿನ ಪ್ರದೇಶ ಹಾಗೂM/s, BEML, M/s, Automotive Axles, M/s, Infosys ನ ಇ.ಹೆಚ್.ಟಿ ಬಳಕೆದಾರರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ, ಸಾರ್ವಜನಿಕರು ಸಹಕರಿಸಬೇಕು ಎಂದು ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.