ರಾಮನಗರ: 66 ಕೆವಿ ಕೆ.ಐ.ಡಿ.ಬಿ ಹಾರೋಹಳ್ಳಿ ವಿ.ಆರ್.ದೊಡ್ಡಿ ಲೈನ್ ಮತ್ತು 66/11ಕೆವಿ ವಿ.ಆರ್.ದೊಡ್ಡಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆದ ಕಾರಣ ಸೋಮೇದ್ಯಾಪನಹಳ್ಳಿ, ವಿ.ಆರ್. ದೊಡ್ಡಿ ಪಂಚಾಯಿತಿ, ಬ್ಯಾಲಾಳು, ಸಿದ್ದಾಪುರ, ವಾಡೇದೊಡ್ಡಿ, ತಿಮ್ಮೇಗೌಡನದೊಡ್ಡಿ, ಕೆಬ್ಬೆದೊಡ್ಡಿ, ಬಾಚಳ್ಳಿದೊಡ್ಡಿ ಮತ್ತು ಅತ್ತಿಹಳ್ಳಿ, ಸೂರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಾಳೆ ಸೆ.17ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.