ಮೈಸೂರು: ನಾಳೆ ಮೇ.೨೯ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫:೩೦ ಗಂಟೆಯವರೆಗೆ ಕೆ.ವಿ ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ೧ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ವ್ಯತ್ಯಯವಾಗಲಿದೆ.
ಹಾಗಾಗಿ ಅಶೋಕ ರಸ್ತೆ, ಲಷ್ಕರ್ ಮೊಹಲ್ಲಾ, ತಿಲಕ್ ನಗರ, ಮಿಷನ್ ಆಸ್ಪತ್ರೆ, ಗಾಂಧಿ ವೃತ್ತ, ಓಲ್ಡ್ ಬ್ಯಾಂಕ್ ರಸ್ತೆ, ಕೆ.ಟಿ. ಸ್ಟ್ರೀಟ್, ದೊಡ್ಡ ಒಕ್ಕಲಿಗರ ಬೀದಿ, ಇರ್ವೀನ್ ರಸ್ತೆ, ಸಯ್ಯಾಜೀರಾವ್ ರಸ್ತೆ, ಒಲಂಪಿಯಾ ಟಾಕೀಸ್, ಪುಲಕೇಶಿ ರಸ್ತೆ, ಕೈಲಾಸಪುರಂ, ಮಂಡಿಮೊಹಲ್ಲಾ, ರಾಜ್‌ಕಮಲ್ ಟಾಕೀಸ್ ಸುತ್ತ-ಮುತ್ತ, ಶಿವರಾಂ ಪೇಟೆ, ಕೆ.ಆರ್.ಆಸ್ಪತ್ರೆ, ಬೋಟಿ ಬಜಾರ್, ಮಾರುಕಟ್ಟೆ, ಧನ್ವಂತರಿ ರಸ್ತೆ, ವೀರನಗೆರೆ, ಶಿವಾಜಿ ರಸ್ತೆ, ಸೆಂಟ್ ಮೇರಿಸ್ ರಸ್ತೆ, ಗಾಂಧಿನಗರ, ಎ.ಜೆ. ಬ್ಲಾಕ್, ಗಣೇಶ್ ನಗರ, ರಾಜೇಂದ್ರನಗರ, ಕೆಸೆರೆ ೧, ೨ ಮತ್ತು ೩ನೇ ಹಂತ, ಸುಭಾಷ್‌ನಗರ, ನ.ರಾ.ಮೊಹಲ್ಲಾ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋಧ್ಯಮಿಗಳು ಸಹಕರಿಸಬೇಕು ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.