ಹೊಸ ಮಾರ್ಗಗಳ ವಿದ್ಯುತ್ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ: ಚೆಸ್ಕಾಂ ಪಿರಿಯಾಪಟ್ಟಣ ಎಇಇ ಗುರು ಬಸವರಾಜಸ್ವಾಮಿ
- ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಹೊಸ ವಿದ್ಯುತ್ ಮಾರ್ಗದ ಕಾಮಗಾರಿ ಚಾಲನೆಯಲ್ಲಿರುವುದರಿಂದ ಏ.6 ರಂದು ಪಿರಿಯಾಪಟ್ಟಣ ನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಚೆಸ್ಕಾಂ ಪಿರಿಯಾಪಟ್ಟಣ ವಿಭಾಗ ಎಇಇ ಗುರು ಬಸವರಾಜಸ್ವಾಮಿ ಕೋರಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪಿರಿಯಾಪಟ್ಟಣ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜುಗೊಳ್ಳುವ ಪಿರಿಯಾಪಟ್ಟಣ ನಗರ, ಮುತ್ತೂರು, ಮಾಲಂಗಿ, ಚೌತಿ, ಚಿಟ್ಟೆನಹಳ್ಳಿ, ಕಿರನಲ್ಲಿ, ಪಂಚವಳ್ಳಿ, ರಾಮನಾಥತುಂಗಾ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.