ಚಾಮರಾಜನಗರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಚಾಮರಾಜನಗರ, ಸಂತೇಮರಹಳ್ಳಿ ಹಾಗೂ ಬೇಗೂರು ಉಪವಿಭಾಗ ವ್ಯಾಪ್ತಿಯಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಾಳೆ ಡಿ ೨೨ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಚಾಮರಾಜನಗರ ಟೌನ್-೧, ಕೋಡಿಮೋಳೆ, ರಾಮಸಮುದ್ರ, ಮಾದಾಪುರ, ಕಾಗಲವಾಡಿ, ಸೋಮವಾರಪೇಟೆ ಟೌನ್-೨, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ಗೂಳಿಪುರ ಎನ್.ಜೆ.ವೈ, ಹೊಂಗನೂರು, ಇರಸವಾಡಿ, ಮಸಣಾಪುರ, ಚಾಟಿಪುರ, ಗಂಗವಾಡಿ, ಬೂದಂಬಳ್ಳಿ, ಬೂದಂಬಳ್ಳಿ ಮೋಳೆ, ಗೂಳಿಪುರ, ಹೊಮ್ಮ, ರೇಚಂಬಳ್ಳಿ, ಹೆಚ್. ಮೂಕಳ್ಳಿ, ಕುರುಬರಹುಂಡಿ, ಹಾಲಳ್ಳಿ, ಕಮರಹಳ್ಳಿ, ಬೊಗ್ಗನಪುರ, ಮರಳಾಪುರ, ರಂಗನಾಥಪುರ, ತೊರವಳ್ಳಿ, ನಿಟ್ರೆ, ಹಿರಿಕಾಟಿ, ಚಿಕ್ಕಾಟಿ, ಅರೆಪುರ, ತೊಂಡವಾಡಿ ಮತ್ತು ಬೇಗೂರು, ವಾಟರ್ ಸಪ್ಲೈ, ಹೆಗ್ಗಡಹಳ್ಳಿ, ಮಂಚಳ್ಳಿ ಎನ್.ಜೆ.ವೈ, ಶೆಟ್ಟಿಹಳ್ಳಿ, ದೇಸಿಪುರ, ಇಂಡಸ್ಟ್ರಿಯಲ್, ಹೊರೆಯಾಲ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ ೧೯೧೨ ಗೆ ಕರೆ ಮಾಡುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.