Friday, April 11, 2025
Google search engine

Homeವಿದೇಶನೇಪಾಳದಲ್ಲಿ ಪ್ರಬಲ ಭೂಕಂಪ: 128 ಮಂದಿ ಸಾವು, ಕಟ್ಟಡಗಳು ನೆಲಸಮ

ನೇಪಾಳದಲ್ಲಿ ಪ್ರಬಲ ಭೂಕಂಪ: 128 ಮಂದಿ ಸಾವು, ಕಟ್ಟಡಗಳು ನೆಲಸಮ

ಕಠ್ಮಂಡು: ನೇಪಾಳದ ಕಠ್ಮಂಡು ಸೇರಿದಂತೆ ಹಲವು ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 128 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳು ನೆಲಸಮಗೊಂಡಿವೆ.

ಶುಕ್ರವಾರ ರಾತ್ರಿ(ನ.3 ರಂದು) ನೇಪಾಳದ ಜಾಜರ್ಕೋಟ್ ಮತ್ತು ರುಕುಮ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 6.4 ರ ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಜಾಜರ್ಕೋಟ್ ನ ಲ್ಯಾಮಿಡಾಂಡಾ ಪ್ರದೇಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ರಾತ್ರಿ 11:32 ಕ್ಕೆ 10 ಕಿಮೀ ಆಳದಲ್ಲಿ ಭೂಕಂಪನ ಆಗಿವೆ ಎಂದು ವರದಿ ತಿಳಿಸಿದೆ.

ಅಧಿಕೃತವಾಗಿ ರುಕುಮ್ ವೆಸ್ಟ್‌ ನಲ್ಲಿ ಕನಿಷ್ಠ 36 ಜನರು ಮತ್ತು ಜಾಜರ್ಕೋಟ್ ನಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ಭೂಕಂಪದ ಪರಿಣಾಮ ಹಲವು ಕಟ್ಟಡಗಳು ಕುಸಿದು ಬಿದ್ದಿದ್ದು, ಜನ ಅತ್ತಿತ್ತ ನೋಡಿ ತನ್ನವರನ್ನು ಹುಡುಕುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದೆಹಲಿ-ಎನ್‌ ಸಿಆರ್ ಪ್ರದೇಶ  ಹಾಗೂ ಇಂಡೋ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಕತಿಹಾರ್, ಮೋತಿಹಾರಿ ಮತ್ತು ಬಿಹಾರದ ಹಲವಾರು ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ.

ಜಾಜರ್ಕೋಟ್ ಮತ್ತು ರುಕುಮ್ ಮಾತ್ರವಲ್ಲದೆ ಡೈಲೇಖ್, ಸಾಲ್ಯಾನ್ ಮತ್ತು ರೋಲ್ಪಾ ಜಿಲ್ಲೆಗಳು ಸೇರಿದಂತೆ ಇತರ ಜಿಲ್ಲೆಗಳಲ್ಲೂ ಅಪಾರ ಹಾನಿ ಹಾಗೂ ಅನೇಕರಿಗೆ ಗಾಯಗಳಾಗಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಗಾಯಾಳುಗಳು ಕಠ್ಮಂಡುವಿನಿಂದ ಪಶ್ಚಿಮಕ್ಕೆ 500 ಕಿಲೋಮೀಟರ್ ದೂರದಲ್ಲಿರುವ ಜಾಜರ್ಕೋಟ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ವರದಿ ತಿಳಿಸಿದೆ.

RELATED ARTICLES
- Advertisment -
Google search engine

Most Popular