ಕೆ ಆರ್ ನಗರ: ತಾಲೂಕಿನ ಲಾಲನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಸೌಮ್ಯ ವಿರೂಪಾಕ್ಷ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಪ್ರಭಾವತಿ ಮೂರ್ತಿ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆಯ ಸಿ ಡಿ ಒ ರವಿ.ಎಸ್ ರವರು ಪ್ರಭಾವತಿ ಮೂರ್ತಿರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನಾನು ಅಧ್ಯಕ್ಷ ಆಗಲು ಸಹಕರಿಸಿದ ಸಂಘದ ನಿರ್ದೇಶಕರಿಗೂ ಹಾಗೂ ಸದಸ್ಯರಿಗೂ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಾಮ ನಿರ್ದೇಶಕಿ ಮಲ್ಲಿಕಾರವಿಕುಮಾರ್ ಸಂಘದ ಮಾಜಿ ಅಧ್ಯಕ್ಷರಾದ ಸೌಮ್ಯ ವಿರೂಪಾಕ್ಷ ಸದಸ್ಯರಾದ ಸುಜಾತ ರುದ್ರಮೂರ್ತಿ, ಭಾರತಿ ಶಿವಾನಂದ್, ರಾಜೇಶ್ವರಿ ಮಹದೇವಪ್ಪ, ನಾಗರತ್ನ ನಾಗರಾಜ್, ನಾಗಮಣಿ ಚಂದ್ರಶೇಖರ್, ತ್ರಿವೇಣಿ ಬಸವರಾಜ್ ಗ್ರಾಮದ ಮುಖಂಡರಾದ ರವಿಕುಮಾರ್, ಗ್ರಾಮ ಪಂಚಾಯತಿ ಸದಸ್ಯರದ ಎಲ್.ಎಸ್.ಗುರು, ಎಲ್.ಪಿ ಉಮೇಶ, ಗ್ರಾಮದ ಮುಖಂಡರಾದ ಚೇತನ್ ಕುಮಾರ್( ಗುರು) ಎಲ್.ವಿ ರವಿಕುಮಾರ್, ಮೂರ್ತಿ, ಸಂಘದ ಕಾರ್ಯದರ್ಶಿ ಅಂಬಿಕಾ ಚಂದ್ರಶೇಖರ್,ಹಾಲು ಪರೀಕ್ಷಕಿ ಸಾಕಮ್ಮ ನಂದಿಶ್ ಹಾಗೂ ಇತರರು ಭಾಗವಹಿಸಿದ್ದರು.