ಚಾಮರಾಜನಗರ: ಮನಸ್ಸಿಗೆ ಶಾಂತಿ ನೀಡುವುದೇ ಬಹುದೊಡ್ಡ ಉಡುಗೊರೆ. ಮನಸ್ಸಿನ ಶಾಂತ ಚಿಂತನೆ, ಶುಭ ಹಾರೈಕೆಗಳೇ ,ವಿಶ್ವದ ಶಾಂತಿಗೆ ಪೂರಕವೆಂದು ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಪಿ.ಕೆ ದಾನೇಶ್ವರಿ ರವರು ತಿಳಿಸಿದರು.
ಅವರು ಪ್ರತಾಪಿತ ಬ್ರಹ್ಮಾ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗು ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ವಿಶ್ವಶಾಂತಿ ದಿನದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಾ ವಿಶ್ವಶಾಂತಿ ಇಂದು ಅಗತ್ಯವಾಗಿದೆ . ಪರಸ್ಪರ ದ್ವೇಷ, ಅಸೂಯೆ ,ಸಾಮ್ರಾಜ್ಯ ವಿಸ್ತರಣೆ ಮೂಲಕ ಅಶಾಂತಿಯ ಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದೇವೆ.
ಮಾನವ ಪರಿಪೂರ್ಣ ವ್ಯಕ್ತಿತ್ವ ವಿಕಾಸವಾಗಿ ಜೀವನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಮನಸ್ಸಿಗೆ ಶಾಂತಿಯನ್ನು ನೀಡಿದಾಗ ಪ್ರತಿಯೊಬ್ಬರಲ್ಲಿಯೂ ಆ ಶ್ರೇಷ್ಠ ಭಾವನೆ ಮೂಡುತ್ತದೆ. ಶಾಂತಿಗೆ ದಿವ್ಯ ಶಕ್ತಿ ಇದ್ದು ಪರಿಸರವನ್ನು ದಿವ್ಯತೆಗೆ ತೆಗೆದುಕೊಂಡು ಹೋಗುತ್ತದೆ ಋಗ್ವೇದಿ ಯೂಥ್ ಕ್ಲಬ್ ಪ್ರತಿ ವರ್ಷ ಅಂತರಾ ರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಮಾರ್ಗದರ್ಶನವನ್ನು ನೀಡುತ್ತಿದೆ. ಪ್ರತಿಕ್ಷಣವನ್ನು ಸೇವಾ ಭಾವನೆಯ ಮೂಲಕ, ಶಾಂತಿ ನೆಲೆಸಿ ಸನ್ಮಾರ್ಗದ ಕಡೆಗೆ ಸಮಾಜವನ್ನು ತೆಗೆದುಕೊಂಡು ಹೋಗಲು ಸಾಧ್ಯವೆಂದರು.
ಅಂತರಾಷ್ಟ್ರೀಯ ವಿಶ್ವಶಾಂತಿ ದಿನದ ಬಗ್ಗೆ ಮಾತನಾಡಿದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ನೀಡುತ್ತಾ ಪ್ರತಿಯೊಬ್ಬರಲ್ಲೂ ಆಧ್ಯಾತ್ಮಿಕ ಶ್ರೇಷ್ಠತೆಯನ್ನು, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜದ ಪ್ರತಿಯೊಬ್ಬರಲ್ಲಿಯೂ ಶಾಂತಿಯನ್ನು ಕಾಣುವ ಮೂಲಕ ಸುಂದರ ಸಮಾಜವನ್ನು ನಿರ್ಮಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸುವ ಮೂಲಕ ವಿಶ್ವ ಶಾಂತಿಯ ಸಂಸ್ಥೆಯಾಗಿ ಹೊರಹೊಮ್ಮಿದೆ. ವಿಶ್ವಸಂಸ್ಥೆಯಿಂದಲೂ ಗೌರವಕ್ಕೆ ಪಾತ್ರವಾಗಿದೆ.
ಪ್ರಜಾಪಿತ ಬ್ರಹ್ಮಕುಮಾರಿ ಸಂದೇಶಗಳನ್ನು ಅರಿಯುವ ಸ್ವ ಪರಿವರ್ತನೆ ಹಾಗೂ ಸಮಾಜದ ಪರಿವರ್ತನೆ ವಿಶ್ವಶಾಂತಿಗೆ ನಾವೆಲ್ಲರೂ ಶ್ರಮಿಸೋಣ. ನಾಗರೀಕ ಸಮಾಜ ಶಾಂತಿಗಾಗಿ ಶ್ರಮಿಸುವ ಇಂತಹ ಸಂಸ್ಥೆಗಳಿಗೆ ಗೌರವಿಸುವ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಅಂತರಾಷ್ಟ್ರೀಯ ವಿಶ್ವಶಾಂತಿ ದಿನದ ಕಾರ್ಯಕ್ರಮದಲ್ಲಿ ಬೀ ಕೆ ಆರಾಧ್ಯ, ಸುಬ್ರಹ್ಮಣ್ಯ, ನಾಗರಾಜು, ಪುಟ್ಟಶೇಖರ ಮೂರ್ತಿ, ಶ್ರೀನಿವಾಸ್ ,ಸಿದ್ದರಾಜು, ಜಯಲಕ್ಷ್ಮಿ, ಪ್ರಮೀಳಾ, ಶಶಿ ,ಆಶಾ ಮುಂತಾದವರು ಉಪಸ್ಥಿತರಿದ್ದರು.