Monday, April 21, 2025
Google search engine

Homeರಾಜ್ಯಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದೇಶದ ಇತಿಹಾಸದಲ್ಲಿ ದೊಡ್ಡ ಲೈಂಗಿಕ ಹಗರಣ: ಕೃಷ್ಣಬೈರೇಗೌಡ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ದೇಶದ ಇತಿಹಾಸದಲ್ಲಿ ದೊಡ್ಡ ಲೈಂಗಿಕ ಹಗರಣ: ಕೃಷ್ಣಬೈರೇಗೌಡ

ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ದೇಶದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದ್ದು, ನೂರಾರು ಹೆಚ್ಚು ಮಕ್ಕಳನ್ನು ಅತ್ಯಾಚಾರ ಮಾಡಿರುವುದು ಖಂಡನೀಯ. ಮಾಜಿ ಪ್ರಧಾನಿಗಳ ಮೊಮ್ಮಗ ಈ ರೀತಿ ಮಾಡಿರುವುದು ದೊಡ್ಡ ತಪ್ಪು ಎಂದು ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಮಗ ಇಷ್ಟೆಲ್ಲ ಮಾಡಿದ್ರೂ ಅವರಿಗೆ ಗೊತ್ತೇ ಇಲ್ವಾ ಅಥವಾ ಗೊತ್ತಿದ್ದರೂ ಈ ಕೃತ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದರೇ ಅವರ ತಾಯಿ, ತಂದೆ ಇದಕ್ಕೆಲ್ಲ ಉತ್ತರ ಕೊಡಬೇಕು. ಅವರ ಕುಟುಂಬಕ್ಕೆ ಅಧಿಕಾರ ಇದ್ದರೆ ಸಾಕು. ಅಪ್ಪನಿಗೆ PWಆ ಇಲಾಖೆಯೇ ಬೇಕು. ಚಿಕ್ಕಪ್ಪ, ಮಗ, ಅತ್ತೆ, ಸೊಸೆ ಎಲ್ಲರಿಗೂ ಅಧಿಕಾರ ಬೇಕು. ಕೂಡಲೇ ಈ ಬಗ್ಗೆ ತನಿಖೆ ಆಗಬೇಕು, ನಾವು ಉನ್ನತ ಮಟ್ಟದ ತನಿಖೆ ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular