Monday, April 21, 2025
Google search engine

Homeಅಪರಾಧಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಹೈಕೋರ್ಟ್‌ಗೆ ಬಂದಿದ್ದ ಇಬ್ಬರನ್ನು ಬಂಧಿಸಿದ ಎಸ್‌ಐಟಿ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಹೈಕೋರ್ಟ್‌ಗೆ ಬಂದಿದ್ದ ಇಬ್ಬರನ್ನು ಬಂಧಿಸಿದ ಎಸ್‌ಐಟಿ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋಹರಿಬಿಟ್ಟವರನ್ನು ಎಸ್‌ಐಟಿ ಬಂಧಿಸಿದೆ.

ಇಂದು ಮಂಗಳವಾರ ಹೈಕೋರ್ಟ್‌ಗೆ ಬಂದಿದ್ದ ಆರೋಪಿಗಳಾದ ನವೀನ್ ಗೌಡ, ಚೇತನ್ ನನ್ನು ಎಸ್‌ಐಟಿ ಬಂಧಿಸಿದೆ. ವಿಡಿಯೋ ವೈರಲ್ ಮಾಡಿದ್ದವರನ್ನು ಬಂಧಿಸದಕ್ಕೆ ಎಚ್ ಡಿ ಕುಮಾರಸ್ವಾಮಿ ಅವರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಾದ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳ ಬಂಧನವಾಗಿದೆ.

ಅಲ್ಲದೇ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನಲ್ಲಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಹೋರಾಟ ನಡೆಸಲು ಮಾಜಿ ಸಿಎಂ ಎಚ್ ಡಿಕೆ ನಿರ್ಧರಿಸಿದ್ದರು. ಈ ಬಗ್ಗೆ ವಕೀಲರ ಜತೆಗೆ ಜೆಡಿಎಸ್ ಲೀಗಲ್ ಟೀಂ ಈಗಾಗಲೇ ಮಾತುಕತೆ ನಡೆಸಿತ್ತಯ ಎನ್ನಲಾಗಿದೆ. ಇದರ ಬೆನ್ನಲ್ಲೇ ಇದೀಗ ಎಸ್ ಐಟಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

RELATED ARTICLES
- Advertisment -
Google search engine

Most Popular