ಮಂಗಳೂರು (ದಕ್ಷಿಣ ಕನ್ನಡ):ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ಐಟಿ ತನಿಖೆಯಿಂದ ನ್ಯಾಯ ಸಿಗುವ ನಿರೀಕ್ಷೆ ಇಲ್ಲ. ಎಸ್ಐಟಿ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ. ವಿಡಿಯೋ ಪ್ರಜ್ವಲ್ ರೇವಣ್ಣ ಅವರದ್ದೇ ಆಗಿದ್ದಲ್ಲಿ ಶಿಕ್ಷೆಯಾಗಲಿ. ಪ್ರಜ್ವಲ್ ರೇವಣ್ಣ ಪಾತ್ರದಷ್ಟೇ ವಿಡಿಯೋ ಹರಿಯ ಬಿಟ್ಟವರ ಪಾತ್ರವೂ ಇದೆ. ಇದೆಲ್ಲದರ ತನಿಖೆ ಆಗಬೇಕಿದ್ದರೆ ಸಿಬಿಐಗೆ ಕೊಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಮಂಗಳೂರಲ್ಲಿಂದು ಆಗ್ರಹಿಸಿದ್ದಾರೆ.