Thursday, April 3, 2025
Google search engine

Homeಅಪರಾಧಕಾನೂನುಪ್ರಜ್ವಲ್ ರೇವಣ್ಣ ಅಂದ ತಕ್ಷಣ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ : ಹೈಕೋರ್ಟ್‌

ಪ್ರಜ್ವಲ್ ರೇವಣ್ಣ ಅಂದ ತಕ್ಷಣ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ : ಹೈಕೋರ್ಟ್‌

ಬೆಂಗಳೂರು: ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು ಎಂದು ಹೇಳುವ ಮೂಲಕ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಎಸ್‌ಐಟಿ ಜಪ್ತಿ ಮಾಡಿರುವ ವಿಡಿಯೋ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಎಸ್‌ಐಟಿ ಜಪ್ತಿ ಮಾಡಿರುವ ವೀಡಿಯೋಗಳನ್ನು ನೀಡುವಂತೆ ಪ್ರಜ್ವಲ್‌ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಸಿಟ್ಟಾದ ಕೋರ್ಟ್‌ ಇತರೆ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು ಎಂದು ಚಾಟಿ ಬೀಸಿತು. ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ ಎಂದು ಕೋರ್ಟ್‌ ಸೂಚಿಸಿತು. ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್‌ ಅರ್ಜಿ ಇತ್ಯರ್ಥಪಡಿಸಿತು.

RELATED ARTICLES
- Advertisment -
Google search engine

Most Popular