Friday, April 4, 2025
Google search engine

Homeಸಿನಿಮಾ‘ಕೆಜಿಎಫ್-2‌ʼ ಗಾಯಕಿ ಜತೆ ದಾಂಪತ್ಯಕ್ಕೆ ಕಾಲಿಟ್ಟ ಪ್ರಮೋದ್‌ ಮರವಂತೆ

‘ಕೆಜಿಎಫ್-2‌ʼ ಗಾಯಕಿ ಜತೆ ದಾಂಪತ್ಯಕ್ಕೆ ಕಾಲಿಟ್ಟ ಪ್ರಮೋದ್‌ ಮರವಂತೆ

ಕುಂದಾಪುರ: ಸ್ಯಾಂಡಲ್‌ವುಡ್‌ ಯುವ ಲಿರಿಕ್ಸ್‌ ರೈಟರ್‌ ಪ್ರಮೋದ್‌ ಮರವಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ʼಕಾಂತಾರʼ ಸಿನಿಮಾದ ʼಸಿಂಗಾರ ಸಿರಿಯೇʼ ಹಾಡಿನ ಮೂಲಕ ಚಂದವನದಲ್ಲಿ ಗಮನ ಸೆಳೆದ ಪ್ರಮೋದ್‌ ಗಾಯಕಿ ಸುಚೇತಾ ಅವರೊಂದಿಗೆ ಇತ್ತೀಚೆಗೆ(ಡಿ.5ರಂದು) ಕುಂದಾಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲಿ ಪ್ರಮೋದ್ “ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ” ಎಂದು ಸಾಲು ಬರೆದು ನಿಶ್ಚಿತಾರ್ಥವಾಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು.

ವಿವಾಹ ಸಮಾರಂಭದಲ್ಲಿ ನಟ – ನಿರ್ದೇಶಕ ರಿಷಬ್‌ ಶೆಟ್ಟಿ ಸೇರಿದಂತೆ ಹಲವರು ಭಾಗಿ ನವದಂಪತಿಗೆ ಶುಭಕೋರಿದ್ದರು.

ಯಾರು ಈ ಸುಚೇತಾ?: ಸುಚೇತಾ ಬಸ್ರೂರು. ರವಿ ಬ್ರಸೂರು ಅವರ ತಂಡದಲ್ಲಿ ಕಾಣಿಸಿಕೊಂಡವರು ಮಾತ್ರವಲ್ಲದೆ ಅವರ ಸಂಬಂಧಿಯೂ ಹೌದು. ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ರವಿ ಬಸ್ರೂರು ಅವರ ಅಕ್ಕನ ಮಗಳು ಸುಚೇತ.

ಪ್ರಮೋದ್ ಇದುವರೆಗೂ ‘ಕಾಂತಾರ’, ‘ಯುವ’, ‘ಮುಂದಿನ ನಿಲ್ದಾಣ’, ‘ಕಬ್ಜ’, ‘ಸಖತ್’, ‘ಆದಿಪುರುಷ್’ ಹೀಗೆ ಹಲವು ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಸುಮಾರು 100ಕ್ಕೂ ಅಧಿಕ ಹಾಡುಗಳಿಗೆ ಪ್ರಮೋದ್‌ ಸಾಹಿತ್ಯ ಬರೆದಿದ್ದಾರೆ.

RELATED ARTICLES
- Advertisment -
Google search engine

Most Popular