Friday, April 18, 2025
Google search engine

Homeರಾಜ್ಯಸುದ್ದಿಜಾಲತಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಕ್ಷೇತ್ರ ಗೆದ್ದಿರುವ ಪ್ರತಾಪ್ ಸಿಂಹ ಸೋಲಿನ ನೈತಿಕ ಹೊಣೆ ಹೊರಲಿ:...

ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಕ್ಷೇತ್ರ ಗೆದ್ದಿರುವ ಪ್ರತಾಪ್ ಸಿಂಹ ಸೋಲಿನ ನೈತಿಕ ಹೊಣೆ ಹೊರಲಿ: ಎಂ.ಲಕ್ಷ್ಮಣ್

ಮೈಸೂರು: ಪ್ರತಾಪ್ ಸಿಂಹ ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಒಂದು ಕ್ಷೇತ್ರ ಮಾತ್ರ ಗೆದ್ದಿದ್ದಾರೆ. ಸೋಲಿನ ಬಗ್ಗೆ ಅವರು ನೈತಿಕ ಹೊಣೆ ಹೊರಲಿ ಎಂದು  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಬಿ ಎಲ್ ಸಂತೋಷ್ ಚೇಲಾಗಳ ಅಧ್ಯಕ್ಷ ಪ್ರತಾಪ ಸಿಂಹ, ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎನ್ನುವ ಮೂಲಕ ಕಿಡಿಕಾರಿದ್ದಾರೆ.

ಬಿಜೆಪಿ ಸೋಲಿನ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತೀರಿ?, ಪ್ರತಾಪ ಸಿಂಹಗೆ ಇದ್ದಕ್ಕಿದ್ದಂತೆ ಇದೀಗ ಡಿಕೆ ಶಿವಕುಮಾರ್ ಮೇಲೆ ಪ್ರೀತಿ ಉಂಟಾಗಿದೆ. ಇಲ್ಲ ಸಲ್ಲದ ಆರೋಪ ಮಾಡಿ ಡಿಕೆ ಶಿವಕುಮಾರ್‌ರನ್ನು ಜೈಲಿಗೆ ಹಾಕಿಸಿದ್ದೀರಿ, ಅವರು ಜೈಲಿಗೆ ಹೋದಾಗ ಉಪ್ಪು ತಿಂದವರು ನೀರು ಕುಡೀತಾರೆಂದು ಹೇಳಿದ್ದಿರಲ್ಲ ಎಂದರು.

ಇನ್ನು ಇದೇ ವೇಳೆ ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ವಿಚಾರವಾಗಿ ‘ಡಾ ಹೆಚ್ ಸಿ ಮಹದೇವಪ್ಪ ಜೊತೆ ಚರ್ಚೆಗೆ ಸಂಸದ ಪ್ರತಾಪಸಿಂಹಗೆ ಸವಾಲು ಹಾಕಿದ್ದಾರೆ. ಏರ್ ಪೋರ್ಟ್ ವಿಚಾರವಾಗಿ ನೀವು ಹೇಳಿದ ಕಡೆಯಲ್ಲಿ ಒಂದು ಸಭೆ ಮಾಡೋಣ, ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಅದನ್ನು ತಿಳಿಸಿ. ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಕರೆದುಕೊಂಡು ಬರುತ್ತೇವೆ. ಏರ್ ಪೋರ್ಟ್ ಅಭಿವೃದ್ಧಿಗೆ ನಿಮ್ಮ ಯೋಜನೆ ಏನಿದೆ ಎಂದು ಹೇಳಿ, ಕೇಂದ್ರ ಸರ್ಕಾರದಿಂದ ಏನೆಲ್ಲಾ ಸಹಕಾರ ತರಬೇಕು ಮೊದಲು ತನ್ನಿ, ನಮ್ಮಿಂದ ಏನು ಬೇಕು ಎಲ್ಲವನ್ನು ಸಹಕಾರ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಎಂ ಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ ಸಿಂಹಗಿಲ್ಲ. ಮೈಸೂರಿನಲ್ಲಿ ಯಾರನ್ನೂ ಒಬ್ಬರನ್ನು ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿದ್ದಾರೆ. ಅವರ ಮೂಲಕ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಬೇನಾಮಿ ದುಡ್ಡಿನಲ್ಲಿ ಬಂದ ಹಣವನ್ನು ಮಡಿಕೇರಿಯಲ್ಲಿ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಅದರ ಮೇಲೆ 60 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿರುವ ಅವರಿಗೂ ನಿಮಗೂ ಇರುವ ಸಂಬಂಧವೇನು? ಪ್ರತಾಪ್​ ಸಿಂಹ ಬ್ಲಾಕ್ ಮನಿ ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಸಿಎಂಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸುತ್ತೇನೆ ಎಂದು ಎಂ ಲಕ್ಷ್ಮಣ ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular