Friday, April 11, 2025
Google search engine

Homeರಾಜ್ಯಸುದ್ದಿಜಾಲಮಕ್ಕಳಲ್ಲಿರುವ ಕಲಿಕೆ ಹೊರತರಲು ಪ್ರತಿಭಾ ಕಾರಂಜಿ ಅತ್ಯವಶ್ಯಕ : ಪುರಸಭಾ ಸದಸ್ಯ ರಾಜ್ ಗೋಪಾಲ್

ಮಕ್ಕಳಲ್ಲಿರುವ ಕಲಿಕೆ ಹೊರತರಲು ಪ್ರತಿಭಾ ಕಾರಂಜಿ ಅತ್ಯವಶ್ಯಕ : ಪುರಸಭಾ ಸದಸ್ಯ ರಾಜ್ ಗೋಪಾಲ್

ಗುಂಡ್ಲುಪೇಟೆ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಗಳು ಮಕ್ಕಳಿಗೆ ಅತ್ಯವಶ್ಯಕ ಎಂದು ಪುರಸಭಾ ಸದಸ್ಯರಾದ ರಾಜ್ ಗೋಪಾಲ್ ರವರು ತಿಳಿಸಿದರು.

ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಗ್ಗಳ ಮತ್ತು ಟೌನ್ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಇವರು ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿದೆ ಮದ್ಯಾಹ್ನದ ಬಿಸಿಯೂಟ ಯೋಜನೆ,ಕ್ಷೀರ ಭಾಗ್ಯ,ಉಚಿತ ಪಠ್ಯಪುಸ್ತಕ, ಬೈಸಿಕಲ್, ಮೊಟ್ಟೆಭಾಗ್ಯ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುವ ದೃಷ್ಟಿಯಿಂದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಅದರಂತೆ ಶಿಕ್ಷಣದ ಜೊತೆಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರ್ತಿಸಲು ಕಲಿಯೆ ಮೂಲಕ ಕಾರಂಜಿ ಕಾರ್ಯಕ್ರಮನ್ನ ನಡೆಸಿ ಪ್ರತಿಭೆ ಗುರ್ತಿಸಿದಾಗ ಮಕ್ಕಳಿಗೆ ಖುಷಿ ಉಂಟಾಗುತ್ತದೆ ಮತ್ತು ಶಿಕ್ಷಣದಲ್ಲಿಹೆಚ್ಚಿನ ಆಶಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಮೋಹನ್ ಕುಮಾರ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ. ಉಮೇನಾದಿಯಾ, ಶರ್ಮಿಳಾ ಬಾನು,ರಿಹಾನ ಬಾನು, ರೇಣುಕಮ್ಮ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular