ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಪಿಎಫ್ ಐ ಮುಖಂಡ ಶಾಫಿ ಬೆಳ್ಳಾರೆಯವ್ರನ್ನು ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಬಾಡಿ ವಾರೆಂಟ್ ಮೂಲಕ ಪೊಲೀಸರು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಲಾಯ್ತು.
2017 ರಲ್ಲಿ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಪ್ರವೀಣ್ ನೆಟ್ವಾರ್ ಹತ್ಯೆ ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಎನ್.ಐ.ಎ ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಲಾಗಿದೆ. ಈ ವರೆಗೂ ಜಾಮೀನು ಮಂಜೂರಾಗಿಲ್ಲ.
ಕೋರ್ಟ್ ಗೆ ಹಾಜರು ಪಡಿಸಿದ ಅವರನ್ನು ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಾಯ್ತು. ಇದೇ ವೇಳೆ ಕಾರ್ಯಕರ್ತನೋರ್ವ ಓಡಿ ಬಂದು ಶಾಫಿಯವ್ರ ಹಣೆಗೆ ಮುತ್ತಿಕ್ಕಿದ ಘಟನೆ ನಡೀತು.