ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೊಲೆ ಆರೋಪಿ ನೌಷದ್ ಮನೆಯ ಮೇಲೆ ಐವರು NIA ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳ ದಾಳಿಯ ಮಾಹಿತಿಯನ್ನು ತಿಳಿದ ಆರೋಪಿಯ ಕುಟುಂಬಸ್ಥರು ಮನೆ ಲಾಕ್ ಮಾಡಿ ಪರಾರಿಯಾಗಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ನೌಷದ್ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐವರು ಅಧಿಕಾರಿಗಳಿಂದ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದಾಳಿ ವಿಚಾರ ತಿಳಿದು ಮನೆಯನ್ನು ಲಾಕ್ ಮಾಡಿಕೊಂಡು ಕುಟುಂಬ ಪರಾರಿಯಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಯಾಗಿರುವ ನೌಷದ, ಬೆಳ್ತಂಗಡಿ ಠಾಣೆಯ ಇಬ್ಬರು ಪೊಲೀಸರ ಜೊತೆಗೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೇ ಆರೋಪಿ ನೌಷದ್ ಪತ್ತೆಗಾಗಿ 2 ಲಕ್ಷ ರಿವಾರ್ಡ್ ಘೋಷಿಸಿದ್ದಾರೆ.