Saturday, April 19, 2025
Google search engine

Homeಸ್ಥಳೀಯಕಾಂಗ್ರೆಸ್ ಪಕ್ಷದಲ್ಲಿ ವಿಶ್ವ ಕರ್ಮ ಮುಖಂಡರಿಗೆ ಆದ್ಯತೆ : ಶಾಸಕ ಡಿ.ರವಿಶಂಕರ್

ಕಾಂಗ್ರೆಸ್ ಪಕ್ಷದಲ್ಲಿ ವಿಶ್ವ ಕರ್ಮ ಮುಖಂಡರಿಗೆ ಆದ್ಯತೆ : ಶಾಸಕ ಡಿ.ರವಿಶಂಕರ್


ಕೆ.ಆರ್.ನಗರ: ಕಾಂಗ್ರೆಸ್ ಪಕ್ಷದಿಂದ ವಿಶ್ವ ಕರ್ಮ ಸಮಾಜಕ್ಕೆ ರಾಜಕೀಯ ಅಧಿಕಾರ ನೀಡುತ್ತಾ ಬಂದಿದ್ದು ಸರ್ಕಾರದಿಂದ ನಾಮನಿರ್ದೇಶನ ಮಾಡುವ ಸಂಧರ್ಭದಲ್ಲಿ ಸಮಾಜದ ಮುಖಂಡರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಮಾಜದ ಹಲವು ಮುಖಂಡರಿಗೆ ನಾಮನಿರ್ದೇಶನ ಆಗುವ ಅವಕಾಶ ಕಲ್ಪಿಸಲಾಗಿತ್ತು ಎಂದರು.
ಪುರಸಭೆಗೆ ನಾಮ ನಿರ್ದೇಶನ ಮಾಡುವುದರ ಜತೆಗೆ ಚುನಾವಣೆಗೆ ಸ್ಪರ್ದಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತು ಎಂದು ಮಾಹಿತಿ ನೀಡಿದ ಶಾಸಕರು ಅವಕಾಶಗಳು ಬಂದಾಗ ವಿಶ್ವಕರ್ಮ ಸಮಾಜವನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದಲ್ಲದೆ ಹಿಂದುಳಿದ ಸಮಾಜದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಸಮುದಾಯ ಭವನ ನಿರ್ಮಾಣ ಮಾಡಲು ಸ್ವಾಮೀಜಿಯವರ ಸಮ್ಮುಖದಲ್ಲಿ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದ್ದು, ಅದೇ ನಿವೇಶನದಲ್ಲಿ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಇದಕ್ಕೆ ಸಮಾಜದವರು ಸಹಕಾರ ನೀಡಬೇಕು ಎಂದು ಕೋರಿದ ಶಾಸಕರು ಬೇಕಾಗುವ ಅನುದಾನವನ್ನು ಸರ್ಕಾರದಿಂದ ಮತ್ತು ಶಾಸಕರ ನಿಧಿಯಿಂದ ಕೊಡಿಸಲಾಗುತ್ತದೆ ಎಂದು ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿದ್ದಪ್ಪಾಜಿ ದೇವಾಲಯ ಮತ್ತು ಕಾಳಿಕಾಂಭ ಕಮಠೇಶ್ವರಿ ದೇವಾಲಯಕ್ಕೂ ಈ ಹಿಂದೆ ಸರ್ಕಾರದಿಂದ ಅನುದಾನ ಕೊಡಿಸಲಾಗಿತ್ತು ಮುಂದುವರಿದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿ ದೇವಾಲಯ ಕಟ್ಟಡವನ್ನು ಪೂರ್ಣಗೊಳಿಸಲು ಶ್ರಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸಮುದಾಯದ ಅನುಕೂಲಕ್ಕಾಗಿ ಭವನ ಸೇರಿದಂತೆ ಇತರ ಅಭಿವೃದ್ದಿ ಕೆಲಸಗಳನ್ನು ಮಾಡುವಾಗ ಸಮಾಜದ ಮುಖಂಡರುಗಳು ರಾಜಕೀಯ ಲಾಭ ಪಡೆಯಲು ಮುಂದಾಗಬಾರದು ಎಂದು ಕಿವಿ ಮಾತು ಹೇಳಿದ ಶಾಸಕ ಡಿ.ರವಿಶಂಕರ್ ಸಾರ್ವಜನಿಕವಾಗಿ ಸಮಾಜಕ್ಕೆ ಆಗಬೇಕಾಗಿರುವ ಕೆಲಸ ಮಾಡುವಾಗ ರಾಜಕೀಯ ಹೊರತು ಪಡಿಸಿ ಅಭಿವೃದ್ದಿಗೆ ಮನ್ನಣೆ ನೀಡಲಾಗುತ್ತದೆ ಎಂದು ತಿಳಿಸಿದರು.
ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಡಿ.ರವಿಶಂಕರ್‌ರವರಿಗೆ ಸಮಾಜದ ವತಿಯಿಂದ ಭಿನ್ನವತ್ತಳೆ ನೀಡಿ ಸನ್ಮಾನಿಸಲಾಯಿತು.
ಪುರಸಭೆ ಮಾಜಿ ಸದಸ್ಯ ಕೆ.ಬಿ.ಸುಬ್ರಮಣ್ಯ, ನಿವೃತ್ತ ಪಿಎಸ್‌ಐ ಸಿ.ಡಿ.ರಾಜಾಚಾರ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಹೆಚ್.ಡಿ.ಯೋಗೀಶ್, ಸಮಾಜದ ಮುಖಂಡರಾದ ಪುಟ್ಟಸ್ವಾಮಾಚಾರ್, ದಕ್ಷಿಣಮೂರ್ತಿ, ಲಕ್ಷ್ಮಿಕಾಂತ್, ಪುಟ್ಟಣ್ಣಯ್ಯಚಾರಿ, ನಟಶೇಖರಾಚಾರ್, ಚಂದ್ರಾಚಾರ್, ತಂದ್ರೆಪ್ರಕಾಶ್, ಮಿರ್ಲೆರಾಜು, ಎಂ.ವಿ.ಅರುಣ್, ದಿವಾಕರ್, ಲೋಕೇಶ್‌ಭರಣಿ, ಕೆ.ಎನ್.ತುಳಸಿಕುಮಾರ್, ರೇಣುಕಾಪ್ರಸನ್ನ, ಭಾಸ್ಕರ್, ದಿನೇಶ್, ಪುಟ್ಟಚಾರಿಕುಮಾರ್, ವೇದಾಂತಚಾರ್, ಕ್ಷೇತ್ರಪಾಲ, ಸಿದ್ದನಕೊಪ್ಪಲುರಾಮಾಚಾರಿ, ಬ್ಯಾಡರಹಳ್ಳಿಕುಮಾರ ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular