ಗದಗ: ಗದಗ ಜಿಲ್ಲೆಯಲ್ಲೂ ಮೋಡ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಗದಗ ನಗರದಲ್ಲಿ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು, ಡಿಸಿ ಹಾಗೂ ಎಸಿ ಅವರಿಗೆ ಪರವಾನಗಿ ಕೇಳಿದ್ದೇವೆ. ಮೋಡ ಬಿತ್ತನೆ ಮಾಡುತ್ತಿರುವ ಏಜೆನ್ಸಿ ಜೊತೆಗೆ ಮಾತನಾಡಿದ್ದೇನೆ. ನಿನ್ನೆ ಮಳೆಯಾಗಿದೆ, ಇವತ್ತು ನೋಡುತ್ತೇವೆ, ಮಳೆ ಕೊರತೆ ಕಂಡು ಬಂದ್ರೆ, ಮೋಡ ಬಿತ್ತನೆ ಮಾಡುತ್ತೇವೆ ಎಂದರು.
ಮೋಡ ಬಿತ್ತನೆಯಿಂದ ಸರಿಯಾಗಿ ಮಳೆ ಆಗೋದಿಲ್ಲ ವಿಚಾರವಾಗಿ ಮಾತನಾಡಿ, ಮೋಡ ಬಿತ್ತನೆ ಒಂದು ವಿಜ್ಞಾನ. ನಾನು ನೀರಾವರಿ ಸಚಿವನಾಗಿದ್ದಾಗ, 2003 ರಲ್ಲಿ 85 ದಿನ ಮೋಡ ಬಿತ್ತನೆ ಮಾಡಿದ್ವಿ. 60 ದಿನಗಳ ಕಾಲ ಶೇಕಡಾ 22 ರಷ್ಟು ಮಳೆಯಾಗಿದೆ. 2008, 2017- 18 ರಲ್ಲಿ ಮಾಡಲಾಗಿತ್ತು, ಅವೆಲ್ಲಾ, ಯಶಸ್ವಿ ಪ್ರಯೋಗ ಆಗಿವೆ. ಪ್ರಯೋಗ ಹಾಗೂ ವಿಜ್ಞಾನದ ಬಗ್ಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.