ಮಂಗಳೂರು(ದಕ್ಷಿಣ ಕನ್ನಡ): ರಾಜ್ಯ ಸರಕಾರ ನೀಟ್‌ನಿಂದ ಹೊರಗುಳಿಯುಳಿಯುವ ಸರ್ವಾನುಮತದ ತೀರ್ಮಾನ ಕೈಗೊಂಡಿದ್ದು ನಿರ್ಣಯ ಮಂಡನೆ ಆಗಿದೆ. ಇದು ತಾನು ವಿಧಾನಪರಿಷತ್ ಸದಸ್ಯ ನಾಗಿ ಪ್ರಥಮ ಅಧಿವೇಶನದಲ್ಲಿ ನಡೆಸಿದ ಹೋರಾಟ ದಲ್ಲಿ ಸಿಕ್ಕಿದ ಮೊದಲು ಗೆಲುವು ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಮಂಗಳೂರು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿವೇಶನ ಆರಂಭಗೊಂಡ ಮೊದಲ ದಿನವೇ ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ನೀಟ್ ಬಗ್ಗೆ ಮೊದಲ ಪ್ರಶ್ನೆ ಎತ್ತುವ ಮೂಲಕ ಸರಕಾರದ ಗಮನ ಸೆಳೆದಿದ್ದೆ ಎಂದು ಹೇಳಿದರು.