ನವದೆಹಲಿ: ಇಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರನ್ನು ಅಭಿನಂದಿಸಿದರು.
ಯಶಸ್ವಿ ಚುನಾವಣೆಗಾಗಿ ರಾಷ್ಟ್ರಪತಿಗಳು ಚುನಾವಣಾ ಆಯೋಗ ಮತ್ತು ದೇಶದ ಜನರನ್ನು ಅಭಿನಂದಿಸಿದರು ಮತ್ತು ಧನ್ಯವಾದ ಅರ್ಪಿಸಿದರು. ಆರು ದಶಕಗಳ ನಂತರ ದೇಶದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸ್ಥಿರ ಸರ್ಕಾರ ರಚನೆಯಾಗಿದೆ. ಜನರು ಮೂರನೇ ಬಾರಿಗೆ ಈ ಸರ್ಕಾರದ ಮೇಲೆ ನಂಬಿಕೆ ತೋರಿಸಿದ್ದಾರೆ. ಈ ಸರ್ಕಾರ ಮಾತ್ರ ತಮ್ಮ ಆಕಾಂಕ್ಷೆಗಳನ್ನು ಈಡೇರಿಸಬಲ್ಲದು ಎಂದು ಜನರಿಗೆ ತಿಳಿದಿದೆ. ೧೮ನೇ ಲೋಕಸಭೆಯು ಅನೇಕ ವಿಧಗಳಲ್ಲಿ ಐತಿಹಾಸಿಕ ಲೋಕಸಭೆಯಾಗಿದೆ. ಈ ಲೋಕಸಭೆಯನ್ನು ಅಮೃತಕಾಲದ ಆರಂಭಿಕ ವರ್ಷಗಳಲ್ಲಿ ರಚಿಸಲಾಯಿತು.
ಈ ಲೋಕಸಭೆಯು ದೇಶದ ಸಂವಿಧಾನವನ್ನು ಅಂಗೀಕರಿಸಿದ ೫೬ ನೇ ವರ್ಷಕ್ಕೆ ಸಾಕ್ಷಿಯಾಗಲಿದೆ. ಮುಂಬರುವ ಅಧಿವೇಶನಗಳಲ್ಲಿ, ಈ ಸರ್ಕಾರವು ಈ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸಲಿದೆ. ಈ ಬಜೆಟ್ ಸರ್ಕಾರದ ದೂರದೃಷ್ಟಿಯ ಪರಿಣಾಮಕಾರಿ ದಾಖಲೆಯಾಗಲಿದೆ. ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ನಿರ್ಧಾರಗಳ ಜೊತೆಗೆ, ಈ ಬಜೆಟ್ನಲ್ಲಿ ಅನೇಕ ಐತಿಹಾಸಿಕ ಹೆಜ್ಜೆಗಳನ್ನು ಸಹ ಕಾಣಬಹುದು ಅಂತ ತಿಳಿಸಿದರು.