ಎಡತೊರೆ ಮಹೇಶ್
ಎಚ್ ಡಿ ಕೋಟೆ(ಸರಗೂರು): ಸಮಾಜ ಸರಿ ದಾರಿಯಲ್ಲಿ ನಡೆಯಬೇಕಾದರೆ ಪತ್ರಕರ್ತರ ಪಾತ್ರವೂ ಮಹತ್ವದ್ದಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿಶ್ವರ ದೇಶಿ ಕೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ಸರಗೂರು ಪಟ್ಟಣದ ಜೆಎಸ್ ಎಸ್ ಕಾಲೇಜು ಆವರಣದಲ್ಲಿ ಪತ್ರಕರ್ತರ ನೂತನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಾಂಗ ನ್ಯಾಯಾಂಗದ ರೀತಿ ಪತ್ರಿಕಾ ರಂಗವು ಸಹ ಒಂದು ಅಂಗವಾಗಿದ್ದು ಸಮಾಜದಲ್ಲಿ ಆಗುವ ಏಳು ಬೀಳುಗಳನ್ನು ಎತ್ತಿ ತೋರಿಸುವ ಮೂಲಕ ಸಮಾಜವನ್ನು ತಿದ್ದುವ ಮೂಲಕ ಪತ್ರಕರ್ತರು ಕಾರ್ಯೊನ್ಮುಖರಾಗಿದ್ದಾರೆ, ಆದ್ದರಿಂದ ಪತ್ರಿಕಾ ರಂಗವು ಸಮಾಜದಲ್ಲಿ ತನ್ನದೇ ಆದ ಮಹತ್ವವನ್ನ ಹೊಂದಿದೆ ಎಂದರು.
ಈ ವೇಳೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀಚನಹಳ್ಳಿ ಮಂಜು, ಉಪಾಧ್ಯಕ್ಷ ಎಡತೊರೆ ಮಹೇಶ್, ಖಜಾಂಚಿ ಮಂಜು ಕೋಟೆ, ಪ್ರಧಾನ ಕಾರ್ಯದರ್ಶಿ ನಾಗಾರಾಮ, ನಿರ್ದೇಶಕರುಗಳಾದ ಪುಟ್ಟರಾಜು, ಜಿ.ರವಿಕುಮಾರ್, ರೇಣುಕಾಸ್ವಾಮಿ, ರಂಗರಾಜು, ರವಿಕುಮಾರ್, ಹಂಪಾಪುರ ನಾಗೇಶ್, ಸದಸ್ಯರುಗಳಾದ ಚಿಕ್ಕಣ್ಣ, ಸುರೇಶ್, ವಾಸುಕಿ ನಾಗೇಶ್, ಶ್ರೀನಿಧಿ, ಕನ್ನಡಪ್ರಮೋದ್, ದಾಸೇಗೌಡ, ಹಾದನೂರು ಚಂದ್ರ ಸೇರಿದಂತೆ ಇತರರು ಹಾಜರಿದ್ದರು.