Sunday, April 20, 2025
Google search engine

Homeಸ್ಥಳೀಯಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್.ಆರ್ ಮಧುಸೂದನ್ ರವರಿಗೆ ರಾಷ್ಟ್ರೀಯ ,ಅಂತರಾಷ್ಟ್ರೀಯ ಪ್ರಶಸ್ತಿ

ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್.ಆರ್ ಮಧುಸೂದನ್ ರವರಿಗೆ ರಾಷ್ಟ್ರೀಯ ,ಅಂತರಾಷ್ಟ್ರೀಯ ಪ್ರಶಸ್ತಿ

ಮೈಸೂರು: ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್.ಆರ್ ಮಧುಸೂದನ್ ರವರಿಗೆ ಕರ್ನಾಟಕ ಅರಣ್ಯ ಇಲಾಖೆ ಬೆಂಗಳೂರು ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೃಷ್ಣಮೃಗ ಜಿಗಿಯುತ್ತಿರುವ ಛಾಯಾಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಹಾಗೂ ನಗದು ಬಹುಮಾನ ಲಭಿಸಿದ್ದು.

ಈ ಸ್ಪರ್ಧೆಯಲ್ಲಿ ಕರ್ನಾಟಕದ ಅಲ್ಲದೆ ವಿವಿಧ ರಾಜ್ಯಗಳಿಂದ ಸುಮಾರು ೪೭೮ ಸ್ಪರ್ಧಿಗಳು ಭಾಗವಹಿಸಿದರು ೧೫೧೬ ಛಾಯಾಚಿತ್ರಗಳು ಸ್ಪರ್ಧೆಯಲ್ಲಿದ್ದವು. (INW) ಇಂಡಿಯನ್ ನೇಚರ್ ವಾಚ್ ನ ಬೆಸ್ಟ್ ಆಫ್ ೨೧ ಸ್ಪರ್ಧೆಯಲ್ಲಿ ಕೃಷ್ಣಮೃಗ ಜಿಗಿಯುತ್ತಿರುವ ಛಾಯಾಚಿತ್ರ ಆಯ್ಕೆ ಆಗಿರುತ್ತದೆ ಹಾಗೂ ಯೂಥ್ ಫೋಟೋಗ್ರಾಫಿಕ್ ಸೊಸೈಟಿ ಬೆಂಗಳೂರು ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ೩೫ ದೇಶಗಳು ೨೭೯ ಸ್ಪರ್ದಿಗಳು ೩೫೦೪ ಛಾಯಾಚಿತ್ರಗಳು ೧೨ ಮಂದಿ ತೀರ್ಪುಗಾರರಾಗಿದ್ದರು. ಇದರಲ್ಲಿ ಮಧುಸೂದನ್ ಎಸ್‌ಆರ್ ರವರ ಬಾರ್ನ್ ಔಲ್ ( BARN OWL ) ಛಾಯಾಚಿತ್ರಕ್ಕೆ ಫೆಡರೇಶನ್ ಆಫ್ ಇಂಡಿಯನ್ ಫೋಟೋಗ್ರಫಿ (FIP ribben) ರಿಬ್ಬನ್ ದೊರೆತಿದೆ.

RELATED ARTICLES
- Advertisment -
Google search engine

Most Popular