Saturday, April 19, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಬಾಲ್ಯ ವಿವಾಹ ತಡೆಗಟ್ಟಿ: ಶಾಸಕ ಡಿ.ರವಿಶಂಕರ್ ಎಚ್ಚರಿಕೆ

ಸಾಲಿಗ್ರಾಮ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಬಾಲ್ಯ ವಿವಾಹ ತಡೆಗಟ್ಟಿ: ಶಾಸಕ ಡಿ.ರವಿಶಂಕರ್ ಎಚ್ಚರಿಕೆ


ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಬಾಲ್ಯ ವಿವಾಹ ತಡೆಗಟ್ಟಿ ಎಂದು ಶಾಸಕ ಡಿ.ರವಿಶಂಕರ್ ಆಶಾ ಕಾರ್ಯಕರ್ತೆಯರು ಹಾಗು ತಾಲ್ಲೂಕಿನ ಅಧಿಕಾರ ವರ್ಗದವರಿಗೆ ಖಡಕ್ ಎಚ್ಚರಿಕೆ ನೀಡಿದರು.

ಕೆ.ಆರ್.ನಗರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಆಶಾ ಕಾರ್ಯಕರ್ತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ಡಿ.ರವಿಶಂಕರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯವಾಗಿ ಬಾಲ್ಯ ವಿವಾಹಗಳನ್ನು ತಡೆಯಲು ಶಾಲಾ, ಕಾಲೇಜುಗಳ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಆಪ್ತ ಸಮಾಲೋಚನೆ ನಡೆಸಿ ಎಂದರಲ್ಲದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಾಲ್ಯ ವಿವಾಹದ ಸುಳಿವು ಸಿಕ್ಕಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿದ್ದು ಇದು ನನ್ನ ಗಮನಕ್ಕೆ ಕೂಡ ಬಂದಿದ್ದು ನಾವೆಲ್ಲ ತಲೆತಗ್ಗಿಸುವ ಘಟನೆಯಾಗಿದೆ ಆದ್ದರಿಂದ ಈಗಾಲಾದರು ಎಚ್ಚೆತ್ತು ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ಮಾಡುವವರಿಗೆ ಹಾಗೂ ಬಾಲಕಿಯ ಮನವೊಲಿಸಿ ಎಂದರು. ಆವಳಿ ತಾಲ್ಲೂಕಿನಲ್ಲೆಡೆ ಬಾಲ್ಯ ವಿವಾಹ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಲು ಎಲ್ಲ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಈ ಕಾರ್ಯಕ್ಕೆ ಎಲ್ಲ ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೆ.ಆರ್.ನಗರ ತಾಲೂಕು ಆಸ್ಪತ್ರೆ ಮೊದಲ ಸ್ಥಾನ ಸಿಕ್ಕದೆ ಎಂದರೆ ಅದಕ್ಕೆ ಆಶಾ ಕಾರ್ಯಕರ್ತೆಯರು ಮೊದಲು ಕಾರಣರು, ಸರ್ಕಾರದ ಹತ್ತು ಹಲವು ಯೋಜನೆಗಳು ಮನೆ ಮನೆಗೂ ತಲುಪಲು ನಿಮ್ಮಗಳ ಸೇವೆಯೇ ಎಂದು ಪ್ರಶಂಸಿದರಲ್ಲದೆ ಮುಂದೆಯು ಸಹ ನಿಮ್ಮ ಸೇವೆ ಉತ್ತಮವಾಗಿ ಮಾಡಿ ಜನರ ಆರೋಗ್ಯ ಕಾಪಾಡಿ ಎಂದು ತಿಳಿಸಿದರು. ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್ಚುತ್ತಿರುವ ಬಾಲ್ಯ ವಿವಾಹದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಗರ್ಭಿಣಿಯಾಗಿ ಸಮಸ್ಯೆಗೆ ಈಡಾಗುತ್ತಾರೆ, ಅಲ್ಲದೆ ಪೊಲೀಸ್ ಠಾಣೆಯಲ್ಲಿ ಹೆಚ್ಷಾಗಿ ಪೋಕ್ಸ್ ಕಾಯ್ದೆಯ ಪ್ರಕರಣಗಳು ದಾಖಲಾಗುತ್ತಿವೆ ಆದ್ದರಿಂದ ಆಶಾ ಕಾರ್ಯಕರ್ತೆಯರಾದ ನೀವು ಪ್ರತಿ ಮನೆಗೂ ಬೇಟಿಯ ಸಂದರ್ಭದಲ್ಲಿ ಕುಟುಂಬದವರ ಜೊತೆ ಆಪ್ತ ಸಮಾಲೋಚನೆ ನಡೆಸಿ ಎಂದು ಸಲಹೆ ನೀಡಿದರು.

ಕೆಲ ಆಶಾ ಕಾರ್ಯಕರ್ತೆಯರು ತಾಯಿ ಕಾರ್ಡ್ ನೊಂದಣಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ, ಗರ್ಭಿಣಿ ಮಹಿಳೆಯರಿಗೆ ಮೊದಲು ತಾಯಿ ಕಾರ್ಡ್ ನೊಂದಣಿ ಮಾಡಿಸಿ ಹಾಗೂ ಹೆಪಟೈಟಿಸ್ ಬಿ.ಲಸಿಕೆ ಹಾಕಿಸಿ ಎಂದರಲ್ಲದೆ ಬಾಣಂತಿಯ ಮನೆಗೆ ಆರು ವಾರಗಳಲ್ಲಿ ಆರು ಬಾರಿ ಬೇಟಿ ನೀಡಿ ತಾಯಿ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ಎಲ್ಲ ಬೇಟಿಗೂ ನಿಮಗೆ ಗೌರವಧನ ಕೊಡಲಾಗುತ್ತದೆ ಎಂದು ತಿಳಿಸಿದರು.

ಸರ್ಕಾರದ ಸುತ್ತೋಲೆಯಂತೆ ಹೆಣ್ಣಿಗೆ ೧೮ ಗಂಡಿಗೆ ೨೧ ತುಂಬಿದಾಗ ಮಾತ್ರ ವಯಸ್ಕರು, ಆದರೆ ೧೮ ಮತ್ತು ೨೧ ತುಂಬದೇ ಮದುವೆ ಮಾಡುವುದು ಅಪರಾದ, ಕ್ಷೇತ್ರದಲ್ಲಿ ಹೆಚ್ಚಾಗಿ ಪೋಕ್ಸ್ ಪ್ರಕರಣಗಳು ನಡೆಯುತ್ತಿವೆ ಶೋಚನೀಯ ಸಂಗತಿ, ಆಶಾ ಕಾರ್ಯಕರ್ತೆಯರು ಮನಸ್ಸು ಮಾಡಿದರೆ ಇದನ್ನೆಲ್ಲ ಬದಲಾವಣೆ ಮಾಡುವ ಶಕ್ತಿ ನಿಮಗಿದೆ.
ಡಿ.ರವಿಶಂಕರ್, ಶಾಸಕರು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ. ನಗರ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಬ್ಬಾಳು ನಾಗೇಂದ್ರ, ಕೆಂಚಿಮಂಜ, ಪುರಸಭಾ ಸದಸ್ಯ ಪ್ರಕಾಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ. ರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.,ರಮೇಶ್, ಮಹೇಶ್, ಆರ್.ಬಿ.ಎಸ್.ಕೆ. ಕಾರ್ಯಕ್ರಮ ವ್ಯವಸ್ಥಾಪಕಿ ರೇಖಾ, ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಪಾರ್ವತಿ, ತಾಲೂಕು ಆಶಾ ಮೇಲ್ವಿಚಾರಕ್ಕೆ ಶೋಭಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ರಾಜೇಶ್, ಜವರಯ್ಯ ಇದ್ದರು.
ಚಿತ್ರಶೀರ್ಷಿಕೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಆಶಾ ಕಾರ್ಯಕರ್ತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕ ಡಿ.ರವಿಶಂಕರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು.

RELATED ARTICLES
- Advertisment -
Google search engine

Most Popular