Monday, April 21, 2025
Google search engine

Homeಸ್ಥಳೀಯಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ : ಡಾ. ಶ್ರೀನಿವಾಸ್

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ : ಡಾ. ಶ್ರೀನಿವಾಸ್

ಮೈಸೂರು: ಭಾರತದ ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಅಭಿಯಾನ (ಪಿ.ಎಂ. ಜನ್‌ಮನ್) ಕಾರ್ಯಕ್ರಮದ ಅಂಗವಾಗಿ ಜ. ರಂದು ದೇಶದ ೧೮ ರಾಜ್ಯಗಳು ಹಾಗೂ ೧ ಕೇಂದ್ರಾಡಳಿತ ಪ್ರದೇಶದ ನೈಜ ದುರ್ಬಲ ಬುಡಕಟ್ಟು ಗುಂಪಿಗೆ ಸೇರಿದ ಸಮುದಾಯಗಳ ಪ್ರತಿನಿಧಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಲ್. ಶ್ರೀನಿವಾಸ್ ತಿಳಿಸಿದರು.
ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೧ರ ಜನಗಣತಿ ಪ್ರಕಾರ ಭಾರತ ದೇಶದಲ್ಲಿ ಸುಮಾರು ೭೦೦ ಪರಿಶಿಷ್ಟ ವರ್ಗದ ಸಮುದಾಯದವರು ವಾಸಿಸುತ್ತಿದ್ದು ಇವರ ಜನಸಂಖ್ಯೆ ೧೦.೪೫ ಕೋಟಿ ಇದೆ. ಇವುಗಳಲ್ಲಿ ೭೫ ಬುಡಕಟಟು ಸಮುದಾಯಗಳನ್ನು ನೈಜ, ದುರ್ಬಲ ಬುಡಕಟ್ಟು ಎಂದು ಗುರುತಿಸಲಾಗಿದ್ದು ಸುಮಾರು ೭ ಲಕ್ಷ ಕುಟುಂಬಗಳು ಕಾಡು ಮತ್ತು ಕಾಡಂಚಿನಲ್ಲಿರುವ ದೇಶದ ೨೦೦ ಜಿಲ್ಲೆಗಳ ೨೨ ಸಾವಿರ ಹಾಡಿಗಳಲ್ಲಿ ವಾಸಿಸುತ್ತಿರುವುದರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರು ಈ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವುದರಿಂದ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯಮಹಾಅಭಿಯಾನ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದು, ೯ ವಿವಿಧ ಅಭಿವೃದ್ಧಿ ಇಲಾಖೆಗಳ ಮೂಲಕ ೧೧ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳಾದ ಶಾಶ್ವತ ಮನೆ, ಹಾಡಿಗಳಿಗೆ ಸಂಪರ್ಕರಸ್ತೆ ಕುಡಿಯುವ ನೀರು, ಸಂಚಾರಿ ಆರೋಗ್ಯ ಘಟಕ ಅಂಗನವಾಡಿ ಕೇಂದ್ರಗಳು, ವಿದ್ಯುತ್ ಸಂಪರ್ಕ, ಶಾಲೆ, ಹಾಸ್ಟೆಲ್ ಕಟ್ಟಡಗಳು, ಮೊಬೈಲ್ ಟವರ್‍ಸ್ ಕೌಶಾಲ್ಯಾಭಿವೃದ್ಧಿ ತರಬೇತಿ ಸೌಲಭ್ಯಗಳನ್ನು ಒದಗಿಸಲು ೨೪.೧೦೪ ಕೋಟಿ ರೂ. ಮೀಸಲಿರಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ ರೂ. ೧೫.೧೦೪ ಕೋಟಿ ಹಾಗೂ ರಾಜ್ಯಸರ್ಕಾರದ ಪಾಲು ೮ ಸಾವಿರ ಕೋಟಿ ಆಗಿರುತ್ತದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಜೇನು, ಕುರುಬ ಮತ್ತು ಕೊರಗ ಸಮುದಾಯದವರಿಗೆ ಎಲ್ಲಾ ಅಗತ್ಯ ಮೂಲಭೂತ ದಾಖಲೆಗಳಾದ ಆಧಾರ್‌ಕಾರ್ಡ್, ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿ, ಜಾತಿ, ಆಧಾಯ ಪ್ರಮಾಣ ಪತ್ರ, ಪ್ರಧಾನ ಮಂತ್ರಿಗಳ ಕಿಸ್ಸಾನ್ ಸಮ್ಮಾನ್, ವಿಧವಾ ವೇತನ, ವೃದ್ಧಾಪ್ಯ ವೇತನದಂತಹ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡುವ ಗುರಿಯೊಂದಿಗೆ ಮೂಲಭೂತ ದಾಖಲಾತಿಗಳ ನೊಂದಣಿ ಕಾರ್ಯಕ್ರಮದ ಅಭಿಯಾನ ಪ್ರಾರಂಭವಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಕ್ಷೇತ್ರ ಅಧ್ಯಯನ ನಡೆಸಿದ್ದಾರೆ.

ಈ ಕಾರ್ಯಕ್ರಮದ ಸದುಪಯೋಗವನ್ನು ರಾಜ್ಯದ ನೈಜ ದುರ್ಬಲ ಬುಡಕಟ್ಟು ಸಮುದಾಯಗಳು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಪ್ರಭಾ ಅರಸ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular