Monday, August 4, 2025
Google search engine

Homeರಾಜ್ಯಸುದ್ದಿಜಾಲಪ್ರಧಾನಿ ಮೋದಿಯವರು ವಿಶ್ವದ ಮುಂಚೂಣಿ ನಾಯಕ: ಕುಂಬಾರಹಳ್ಳಿ ಸುಬ್ಬಣ್ಣ

ಪ್ರಧಾನಿ ಮೋದಿಯವರು ವಿಶ್ವದ ಮುಂಚೂಣಿ ನಾಯಕ: ಕುಂಬಾರಹಳ್ಳಿ ಸುಬ್ಬಣ್ಣ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: ಸತತ 11 ವರ್ಷಗಳಿಂದ ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರು ವಿಶ್ವದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಂಬಾರಹಳ್ಳಿ ಸುಬ್ಬಣ್ಣ ಸ್ಥಾಪಿಸಿದ್ದಾರೆ.

ಪಟ್ಟಣದ ಶ್ರೀ ಕನ್ನಂಬಾಡಿಯಮ್ಮ ಸಮುದಾಯ ಭವನದಲ್ಲಿ ಗುರುವಾರ ನಡೆದ ತಾಲೂಕು ಬಿಜೆಪಿ ಕಾರ್ಯಕರ್ತರ ಸಂಘಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು ಇದೆ, ಪ್ರಧಾನಿ ಮೋದಿ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತಂದ ನಂತರ ಸ್ಥಿರತೆಯನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು. ರಕ್ಷಣಾ ವಿಷಯದಲ್ಲಿ ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರಗಳು ದೇಶದ ಮಿಲಿಟರಿ ಶಕ್ತಿಯನ್ನು ದೃಢಪಡಿಸಲು ಕಾರಣವಾಗಿವೆ. ಬಿಜೆಪಿ ಪಕ್ಷವು ಪಕ್ಷ ಮತ್ತು ಸಾಮಾನ್ಯ ಕಾರ್ಯಕರ್ತನೂ ಸಹ ಉನ್ನತ ಸ್ಥಾನವನ್ನು ಅಲಂಕರಿಸಲು ಅವಕಾಶವಿರುವ ಏಕೈಕ ಪಕ್ಷ ನಮ್ಮದಾಗಿದೆ ಎಂದರು.

ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಶಕ್ತಿ ಕೇಂದ್ರಗಳು ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದುಳಿದ ವರ್ಗಗಳಿಂದ ಬಂದ ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ನೀಡುವ ಮೂಲಕ ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯವನ್ನು ಪ್ರದರ್ಶಿಸಿದೆ ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ದಿ.ಶ್ರೀನಿವಾಸ ಪ್ರಸಾದ್ ಮತ್ತು ದಿ.ಧ್ರುವನಾರಾಯಣ್ ರ ಗರಡಿಯಲ್ಲಿ ಪಳಗಿದ ಅನುಭವ ನನಗಿದೆ. ನಮ್ಮದೇ ಪಕ್ಷದ ಸಂಸದರ ಬಲ ನಮಗಿದ್ದು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ.

ಬಿಜೆಪಿ ರಾಜ್ಯ ಪ್ರಕೋಷ್ಟ ಸಹ ಸಂಯೋಜಕ ಎನ್.ವಿ.ಪಣೀಶ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಲೇ ಇವೆ. ರಾಜ್ಯಾದ್ಯಂತ ವಿಧಾನಸಭಾ ಕ್ಷೇತ್ರಗಳ ರಸ್ತೆಗಳು ಹಾಳಾಗಿದ್ದು ಅದನ್ನು ದುರಸ್ತಿ ಪಡಿಸಲೇ ಸರ್ಕಾರದಲ್ಲಿ ಹಣವಿಲ್ಲ ಎಂದು ಟೀಕಿಸಿದರು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಾದ ಅಗತ್ಯವನ್ನು ಹೊಂದಿದೆ ಅಗತ್ಯವಿರುವ ಪ್ರತಿಯೊಬ್ಬ ಕಾರ್ಯಕರ್ತರೂ ಪರಿಶ್ರಮದಿಂದ ದುಡಿಯಬೇಕಾಗಿದೆ.

ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ, ಜಿಲ್ಲಾ ಸಂಚಾಲಕ ಮೈ.ವಿ.ರವಿಶಂಕರ್, ಮಾಧ್ಯಮ ವಕ್ತಾರ ದಯಾನಂದ್, ಮಾಜಿ ಶಾಸಕ ಹೆಚ್.ಸಿ.ಬಸವರಾಜು ಇದೆ.

ಕಾರ್ಯಕ್ರಮದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಪಿ.ಎನ್.ಚನ್ನಬಸವರಾಜು, ಎಚ್.ಎಸ್.ರವಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಕೌಲನಹಳ್ಳಿ ಸೋಮಶೇಖರ್, ಪ್ರಶಾಂತ್ ಗೌಡ, ಆರ್.ಟಿ.ಸತೀಶ್, ನಳಿನಿ, ಪಿ.ಜೆ.ರವಿ, ಟಿ.ರಮೇಶ್, ವಸಂತ್ ಕುಮಾರ್, ಕಿರಣ್ ಜಯರಾಮೇಗೌಡ, ಬಾಲಕೃಷ್ಣ, ಲೋಕೇಶ್, ರಾಮಚಂದ್ರ, ಪಾಪಣ್ಣ, ಬಾಲಚಂದ್ರ ,ಸಾಮ್ರಾಟ್, ವಿಕ್ರಂ ರಾಜ್, ರಾಜೇಗೌಡ, ಲೋಕಪಾಲಯ್ಯ, ವಿಜಯ್ ಕುಮಾರ್, ಬೆಮ್ಮತ್ತಿ ಚಂದ್ರು, ಗಾಯಿತ್ರಿ, ಮೀನಾಕ್ಷಿ, ನಿರ್ಮಲ, ಗೀತಾ , ಶುಭ ಗೌಡ, ರಮ್ಯ ಸೇರಿದಂತೆ ನಿರ್ದೇಶಕರು ಇದ್ದರು.

RELATED ARTICLES
- Advertisment -
Google search engine

Most Popular