Tuesday, April 8, 2025
Google search engine

HomeUncategorizedರಾಷ್ಟ್ರೀಯಜುಲೈ 26ರಂದು ಲಡಾಖ್‍ನ ಕಾರ್ಗಿಲ್ ವಿಜಯ ದಿವಸ್‍ನಲ್ಲಿ ಪ್ರಧಾನಿ ಮೋದಿ ಭಾಗಿ

ಜುಲೈ 26ರಂದು ಲಡಾಖ್‍ನ ಕಾರ್ಗಿಲ್ ವಿಜಯ ದಿವಸ್‍ನಲ್ಲಿ ಪ್ರಧಾನಿ ಮೋದಿ ಭಾಗಿ

ನವದೆಹಲಿ: ಇದೇ ಜುಲೈ 26ರಂದು ಲಡಾಖ್‍ನಲ್ಲಿ ನಡೆಯಲಿರುವ 25ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್‍ನಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು , ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್‍ನ 25 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಜುಲೈ 26 ರಂದು ಲಡಾಖ್‍ಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಲೆಫ್ಟಿನೆಂಟ್ ಗವರ್ನರ್ ಬ್ರಿಗ್ (ನಿವೃತ್ತ) ಬಿ ಡಿ ಮಿಶ್ರಾ ಅವರು ಮೋದಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.

1999 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದ ರಜತ್ ಜಯಂತಿ ಯನ್ನು ಗುರುತಿಸಲು ಕಾರ್ಗಿಲ್ ಜಿಲ್ಲೆಯ ದ್ರಾಸ್‍ನಲ್ಲಿ ಜುಲೈ 24 ರಿಂದ 26 ರವರೆಗೆ ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ದ್ರಾಸ್‍ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳ ಕುರಿತು ಚರ್ಚಿಸಲು ಮಿಶ್ರಾ ಅವರು ಇಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯದರ್ಶಿಯಲ್ಲಿ ಸಭೆ ನಡೆಸಿದರು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಜು.26 ರಂದು ಮೋದಿ ಅವರು ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಕಾರ್ಗಿಲ್ ವಿಜಯ್ ದಿವಸ್‍ನ 25 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಸಭೆಗೆ ತಿಳಿಸಿದರು. ಹೆಲಿಪ್ಯಾಡ್‍ನಲ್ಲಿ ಭದ್ರತೆ ಮತ್ತು ಸ್ವಾಗತ, ಅವರ ವಾಹನ ಯಾತ್ರೆಗೆ ಅಗತ್ಯ ವ್ಯವಸ್ಥೆಗಳು, ಸ್ಮಾರಕದಲ್ಲಿ ಪುಷ್ಪಾರ್ಚನೆ ಸಮಾರಂಭದ ವಿಧಾನ, ಯುದ್ಧ ವಿಧವೆಯರೊಂದಿಗೆ ಸಂವಾದ ಮತ್ತು ಹೆಲಿಪ್ಯಾಡ್‍ನಲ್ಲಿ ಹಸಿರು ಕೋಣೆಯನ್ನು ಸಿದ್ಧಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅವರು 8 ಪರ್ವತ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮಲಿಕ್ ಅವರನ್ನು ಡ್ರಾಸ್ ಬ್ರಿಗೇಡ್ ಹೆಲಿಪ್ಯಾಡ್‍ನಲ್ಲಿನ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು ಎಂದು ಅವರು ಹೇಳಿದರು. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವಂತೆ ಮಿಶ್ರಾ ಸಂಬಂಧ ಪಟ್ಟ ಅ„ಕಾರಿಗಳಿಗೆ ಸೂಚಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅವರು ಜು.24 ರಂದು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದರು. 26 ರಂದು ಬೆಳಿಗ್ಗೆ ದ್ರಾಸ್ ಬ್ರಿಗೇಡ್ ಹೆಲಿಪ್ಯಾಡ್‍ಗೆ ಪ್ರಧಾನಿ ಬಂದಿಳಿಯಲಿದ್ದಾರೆ ಮತ್ತು ಸೇನಾ ಅಧಿಕಾರಿಗಳು ಅವರನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಮೇಜರ್ ಜನರಲ್ ಮಲಿಕ್ ಹೇಳಿದ್ದಾರೆ. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳುವ ಮುನ್ನ ಮೋದಿ ಗ್ರೀನ್ ರೂಂನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular