ಹೊಸದಿಲ್ಲಿ : ಈದ್ ಹಿನ್ನೆಲೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಭಾಶಯವನ್ನು ಕೋರಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಈದ್ ಉಲ್ ಫಿತ್ರ್ ಶುಭಾಶಯಗಳು. ಈ ಹಬ್ಬವು ನಮ್ಮ ಸಮಾಜದಲ್ಲಿ ಭರವಸೆ, ಸಾಮರಸ್ಯ ಮತ್ತು ದಯೆಯ ಮನೋಭಾವವನ್ನು ಹೆಚ್ಚಿಸಲಿ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಸಂತೋಷ ಮತ್ತು ಯಶಸ್ಸು ಸಿಗಲಿ, ಈದ್ ಮುಬಾರಕ್ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಈ ಸಂತೋಷದಾಯಕ ಸಂದರ್ಭ ನಿಮಗೆ, ನಿಮ್ಮ ಪ್ರೀತಿ ಪಾತ್ರರಿಗೆ ಶಾಂತಿ, ಸಂತೋಷ, ಸಮೃದ್ಧಿ, ಉತ್ತಮ ಆರೋಗ್ಯ ತರಲಿ ಎಂದು ಹಾರೈಸಿದ್ದಾರೆ.