Friday, April 11, 2025
Google search engine

Homeರಾಜ್ಯಸಂವಿಧಾನ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ

ಸಂವಿಧಾನ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾರತದ ಜನತೆಗೆ ಸಂವಿಧಾನ ದಿನಾಚರಣೆಯ ೭೫ ನೇ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಕೂಡಾ ಸಂವಿಧಾನ ದಿನಾಚರಣೆ’ಯ ಶುಭಾಶಯಗಳನ್ನು ಕೋರಿದರು.

ಸಂವಿಧಾನವು ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯ ಮಂತ್ರವಾಗಿದೆ’ ಎಂದು ಅವರು ದೃಢಪಡಿಸಿದರು. ಸಂವಿಧಾನ ದಿನದಂದು ಹೃತ್ಪೂರ್ವಕ ಶುಭಾಶಯಗಳು. ಇಂದು ಭಾರತವು ಸಂವಿಧಾನದ ೭೫ ನೇ ವರ್ಷಾಚರಣೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದೆ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಸೇರಿದಂತೆ ಎಲ್ಲಾ ಸಂವಿಧಾನ ಶಿಲ್ಪಿಗಳ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ, ಈ ಆಚರಣೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಸಂವಿಧಾನವು ನಮ್ಮ ಪ್ರಜಾಪ್ರಭುತ್ವದ ಆತ್ಮವಾಗಿದೆ, ಸಂವಿಧಾನ ದಿನದ ಸಂದರ್ಭದಲ್ಲಿ, ನಾನು ಬಾಬಾಸಾಹೇಬ್ ಅಂಬೇಡ್ಕರ್ ಜೀ ಮತ್ತು ದೇಶಕ್ಕೆ ಪ್ರಗತಿಪರ ಬಾಧಕಗಳನ್ನು ನೀಡಿದ ಎಲ್ಲಾ ದೇಶಭಕ್ತರಿಗೆ ನಮಸ್ಕರಿಸುತ್ತೇನೆ. ಎಂಬುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular