Thursday, April 3, 2025
Google search engine

HomeUncategorizedರಾಷ್ಟ್ರೀಯನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಗೆ ಭಾವುಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಗೆ ಭಾವುಕ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾವುಕ ಪತ್ರ ಬರೆದಿದ್ದಾರೆ.

ನೀವು ಸಾವಿರಾರು ಮೈಲುಗಳಷ್ಟು ದೂರವಿದ್ದರೂ ಸದಾ ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತೀರಿ” ಎಂದು ಸುನಿತಾ ವಿಲಿಯಮ್ಸ್ ಅವರಿಗೆ ಪತ್ರ ಬರೆದಿರುವ ಮೋದಿ ಅವರು ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಮೂಲಕ ಸುನಿತಾಗೆ ಕಳುಹಿಸಿದ್ದರು. ಈ ಪತ್ರವು 143 ಕೋಟಿ ಭಾರತೀಯರ ಹೆಮ್ಮೆಯನ್ನು ಪ್ರತಿಬಿಂಬಿಸುತ್ತದೆ. ತಮ್ಮ ಭಾರತದ ಜನರ ಪರವಾಗಿ ಈ ಪತ್ರವನ್ನು ಸುನಿತಾಗೆ ತಲುಪಿಸಬೇಕೆಂದು ಮೈಕ್ ಮಾಸ್ಸಿಮಿನೊ ಅವರನ್ನು ಮೋದಿ ಮನವಿ ಮಾಡಿಕೊಂಡಿದ್ದರು. ಇನ್ನು ಮೋದಿ ಅವರು ಬರೆದಿರುವ ಈ ಪತ್ರವನ್ನು ಸಚಿವ ಜಿತೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular