Wednesday, September 17, 2025
Google search engine

Homeರಾಜ್ಯಸುದ್ದಿಜಾಲಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ : ಕಲಬುರಗಿಯಲ್ಲಿ ಸೇವಾ ಸಪ್ತಾಹ ಹಾಗೂ ರಕ್ತ ದಾನ...

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ : ಕಲಬುರಗಿಯಲ್ಲಿ ಸೇವಾ ಸಪ್ತಾಹ ಹಾಗೂ ರಕ್ತ ದಾನ ಶಿಬಿರ

ಕಲಬುರಗಿ :ಗ್ರಾಮಾಂತರ ಜಿಲ್ಲಾ ಕಾರ್ಯಾಲಯದಲ್ಲಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ಸಪ್ತಾಹ ಹಾಗೂ ರಕ್ತದಾನ ಶಿಬಿರವನ್ನು ಬಿ. ವೈ. ವಿಜಯೇಂದ್ರ ಉದ್ಘಾಟಿಸಿದರು.

ಅತ್ಯಮೂಲ್ಯ ಜೀವ ಉಳಿಸುವ ಶ್ರೇಷ್ಠ ರಕ್ತದಾನದ ಜಾಗೃತಿ ಮೂಡಿಸಿ, ವಿಶ್ವವೇ ನಿಬ್ಬರಗಾಗುವಂತೆ ದೇಶ ಮುನ್ನಡೆಸುತ್ತಾ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳುತ್ತಿರುವ ಅವರ ಕ್ರಿಯಾಶೀಲ ಸೇವೆ ಹೀಗೆಯೇ ನಿರಂತರ ಮುಂದುವರಿಯಲೆಂದು ಹಾರೈಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕ ಬಸವರಾಜ ಬಿ. ಮಟ್ಟಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಶಶಿಲ್ ನಮೋಶಿ, ಶಾಸಕ ಡಾ ಅವಿನಾಶ್ ಜಾದವ್, ಮಾಜಿ ಸಚಿವ ಬಾಬುರಾವ್ ಚೌಹಾಣ್, ಕಲ್ಬುರ್ಗಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಮಾಜಿ ಶಾಸಕ ಅಮರನಾಥ್ ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್, ಮುಖಂಡ ಶಿವರಾಜ್ ಪಾಟೀಲ್ ರದ್ದೇವಾಡಿ, ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular