ರಾಷ್ಟ್ರೀಯ ಸೇವಾ ಯೋಜನೆ 2024-25 ರ ಎನ್.ಎಸ್.ಎಸ್. ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ
ಹುಣಸೂರು: ಸಮಾಜದ ಅಂಕುಡೊಂಕುಗಳ ತಿದ್ದುವ ಮಾಧ್ಯಮ ಸಮೂಹಗಳಲ್ಲಿ ಮುದ್ರಣ ಮಾಧ್ಯಮ ಹಲವು ಪೈಪೋಟಿಗಳ ನಡುವೆ ಗಟ್ಟಿಯಾಗಿ ನೆಲೆಯೂರಿದೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ತಿಳಿಸಿದರು.
ತಾಲೂಕಿನ ಹಬ್ಬನಕುಪ್ಪೆ ಗ್ರಾಮದಲ್ಲಿ ಗೋಮಾತೆಯನ್ನು ಪೂಜಿಸುವ ಮೂಲಕ ನಗರದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಸುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ 2024-25 ರ ಎನ್.ಎಸ್.ಎಸ್. ಶಿಬಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮ ಮತ್ತು ಸಮಾಜ ವಿಷಯದಲ್ಲಿ ಮಾತನಾಡಿದ ಅವರು, ಮುದ್ರಣ ಮಾದ್ಯಮ ನೈಜತೆಯ ಮೂಲಕ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ, ತುಂಬಾ ಹೋರಾಟ ಅನಿವಾರ್ಯವಾಗಿದೆ ಎಂದರು.
ಶತಮಾನದ ಅಂಚಿನಲ್ಲಿರುವ ಮುದ್ರಣ ಮಾಧ್ಯಮ. ಗ್ರಾಮೀಣಾಭಿವೃದ್ಧಿ, ರೈತ ಪರ ವರದಿಗಳು, ರಾಜಕೀಯ, ಸಾಹಿತ್ಯ, ಕ್ರೀಡೆ, ಸಂಗೀತ, ಇನ್ನಿತರೆ ಸುದ್ದಿಗಳನ್ನು ಬಿತ್ತರಿಸುವ ನಿಟ್ಟಿನಲ್ಲಿ ಓದುಗರ ಮನಸ್ಸನ್ನು ಗೆದ್ದಿದ್ದಾರೆ, ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ನಡೆದು ಬಂದಿರುವುದು ನಮ್ಮ ಮುದ್ರಣ ಮಾದ್ಯಮ ಹೆಮ್ಮೆಯ ವಿಷಯವಾಗಿದೆ.
ಜ್ಞಾನಧಾರ ಕಾಲೇಜಿನ ವಿದ್ಯಾರ್ಥಿಗಳು ಎನ್.ಎಸ್ ಎಸ್. ಬರಿ ಸ್ವಚ್ಚತಾ ಶಿಬಿರ ಎಂದು ತಿಳಿದುಕೊಳ್ಳದೆ ತಮ್ಮ ಬದುಕಿನ ಅಮೂಲ್ಯ ದಾರಿಯ ಅರಿವೆಂದು ಭಾವಿಸಿ. ಇದು ಉತ್ತಮ ನಾಯಕತ್ವ ಗುಣವನ್ನು ಬೆಳಸಿಕೊಳ್ಳುವುದರ ಜತೆಗೆ ತಮ್ಮ ಗುರಿಗಳಿಗೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ತಾಜೆಗೌಡರು, ಮಹೇಶ್, ರಾಮಲಿಂಗೇಗೌಡ ಪ್ರೇಮ್ ಕುಮಾರ್, ಗಣೇಶ್,ನಟೇಶ್, ತಮ್ಮೇಗೌಡ, ಅಶೋಕ್ ಕುಮಾರ್ ಮಧು, ಡೈರಿ ಗೋವಿಂದಯ್ಯ, ಕೃಷ್ಣಯ್ಯ, ಹರೀಶ್ ಮಂಜು, ಸಣ್ಣಸ್ವಾಮಿ ಗೌಡ, ರಾಮಚಂದ್ರು, ಮೀನಾಕ್ಷಿ ಇತರರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ವಹಿಸಿಕೊಂಡಿದ್ದರು,ಪ್ರಾಂಶುಪಾಲ ಕಾರ್ತಿಕ್ ಹೆಚ್ ಬಿ, ಸಿಬ್ಬಂದಿ ವರ್ಗದವರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.