ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಲಕ್ಕಿಕುಪ್ಪೆ ಮಂಜೇಗೌಡ ತಿಳಿಸಿದರು.
ಅವರು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಡೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿ ದೊರಕುವ ಚಿಕಿತ್ಸೆ ಹಾಗೂ ಉಚಿತ ಔಷಧಿಯ ವಿತರಣೆ ಬಗ್ಗೆ ಬರುವ ರೋಗಿಗಳಿಗೆ ಮಾಹಿತಿ ನೀಡಬೇಕು ಎಂದರು ಹಾಗೂ ರಕ್ತ ಪರೀಕ್ಷೆ ಎಕ್ಸ್ ರೇ ಪರೀಕ್ಷೆಗೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಆಸ್ಪತ್ರೆಗೆ ಆಗ ಬೇಕಾದ ಸವಲತ್ತುಗಳ ಬಗ್ಗೆ ವೈದ್ಯಾಧಿಕಾರಿಗಳಾದ ಮಂಜುನಾಥ್ ಹಾಗೂ ಕೀರ್ತಿ ಅವರಿಂದ ಮಾಹಿತಿ ಪಡೆದು ಶಾಸಕರಾದ ಡಿ ರವಿಶಂಕರ್ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಿಎಸ್ ಎಸ್ ಮುಖಂಡರಾದ ಮನುಗನಹಳ್ಳಿ ದೇವರಾಜ್ ಮಾಜಿ ಗ್ರಾಂ ಪಂ ಸದಸ್ಯರಾದ ಜವರಯ್ಯ ಸಿಬ್ಬಂದಿಗಳಾದ ಶ್ರೀಮಂತ್ ಬಸವರಾಜು ಮಂಜುನಾಥ್ ಸಿದ್ದು ಸೇರಿದಂತೆ ಹಲವರು ಉಪಸ್ಥಿತರಿದ್ದುರು.
