Friday, April 11, 2025
Google search engine

Homeರಾಜ್ಯಖಾಸಗಿ ಬಸ್ ಟಿಕೆಟ್ ದರ ಏರಿಕೆ: ಹಬ್ಬಕ್ಕೆ ಊರಿಗೆ ಹೊರಟವರಿಗೆ ದುಪ್ಪಟ್ಟು ದರ ವಸೂಲಿ

ಖಾಸಗಿ ಬಸ್ ಟಿಕೆಟ್ ದರ ಏರಿಕೆ: ಹಬ್ಬಕ್ಕೆ ಊರಿಗೆ ಹೊರಟವರಿಗೆ ದುಪ್ಪಟ್ಟು ದರ ವಸೂಲಿ

ಬೆಂಗಳೂರು: ಗಣೇಶ ಹಬ್ಬಕ್ಕೆ ಎರಡು ಮೂರು ದಿನಗಳ ರಜೆ ಇದೆ ಎಂದು ಊರಿಗೆ ಹೊರಡಲು ಸಜ್ಜಾಗಿರುವವರಿಗೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಕೆ ಮಾಡಿ ಶಾಕ್ ನೀಡಿದ್ದಾರೆ.

ಸೆಪ್ಟೆಂಬರ್ 6 ಶುಕ್ರವಾರ ಗೌರಿ ಹಬ್ಬ. 7 ರಂದು ಗಣೇಶನ ಹಬ್ಬ. ಭಾನುವಾರ ಹೇಗೂ ರಜೆ ಇದೆ ಹೀಗಾಗಿ ಸೆಪ್ಟೆಂಬರ್ 5ರಂದೆ ಊರಿಗೆ ತೆರಳಲು ಪ್ಲಾನ್ ಮಾಡಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಟಿಕೆಟ್ ದರ ದುಪ್ಪಟ್ಟು ಏರಿಕೆ ಮಾಡಿ ಶಾಕ್ ನೀಡಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೆಪ್ಟೆಂಬರ್ 3ರಂದು ಖಾಸಗಿ ಬಸ್​ಗಳ ಟಿಕೆಟ್ ದರ ವಿವರ

ಬೆಂಗಳೂರು – ಹಾವೇರಿ: 600 – 1200 ರೂ.
ಬೆಂಗಳೂರು-ಗುಲ್ಬರ್ಗ : 600-1200 ರೂ.
ಬೆಂಗಳೂರು-ಯಾದಗಿರಿ: 600-1400 ರೂ.
ಬೆಂಗಳೂರು-ದಾವಣಗೆರೆ: 550-900 ರೂ.
ಬೆಂಗಳೂರು-ಹಾಸನ: 475-600 ರೂ.
ಬೆಂಗಳೂರು-ಧಾರವಾಡ: 500-1100 ರೂ.
ಬೆಂಗಳೂರು-ಚಿಕ್ಕಮಗಳೂರು: 500-900 ರೂ.

ಸೆಪ್ಟೆಂಬರ್ 5ರಂದು ಖಾಸಗಿ ಬಸ್ ಟಿಕೆಟ್ ದರ

ಬೆಂಗಳೂರು-ಹಾವೇರಿ: 1550-1600 ರೂ.
ಬೆಂಗಳೂರು-ಗುಲ್ಬರ್ಗ: 1200-1800 ರೂ.
ಬೆಂಗಳೂರು-ಯಾದಗಿರಿ: 1100-1750 ರೂ.
ಬೆಂಗಳೂರು-ದಾವಣಗೆರೆ: 900-2000 ರೂ.
ಬೆಂಗಳೂರು-ಹಾಸನ: 899-1800 ರೂ.
ಬೆಂಗಳೂರು-ಧಾರವಾಡ: 1200-3000 ರೂ.
ಬೆಂಗಳೂರು-ಚಿಕ್ಕಮಗಳೂರು: 900-1500 ರೂ.

ಗೌರಿ- ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್​​ಟಿಸಿ ಗುಡ್ ನ್ಯೂಸ್ ನೀಡಿದೆ. ಊರಿಗೆ ಹೋಗುವ ಪ್ರಯಾಣಿಕರಿಗಾಗಿ 1500 ಹೆಚ್ಚುವರಿ ಬಸ್​​ಗಳನ್ನು ನಿಯೋಜನೆ ಮಾಡಲಾಗಿದೆ. ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಈ ಹೆಚ್ಚುವರಿ ಬಸ್​​ಗಳು ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್​ಗೆ ವಿಶೇಷ ಕಾರ್ಯಚರಣೆ ಮಾಡಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿಗೆ ವಿಶೇಷ ಬಸ್ ಕಾರ್ಯಚರಣೆ ಮಾಡಲಿದ್ದು, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದೆ. ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್​ಗಳು ವಾಪಸ್ಸಾಗಲಿವೆ. ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್​ಗೆ ಅವಕಾಶ ನೀಡಲಾಗಿದೆ.

RELATED ARTICLES
- Advertisment -
Google search engine

Most Popular