Thursday, September 11, 2025
Google search engine

Homeರಾಜ್ಯಸುದ್ದಿಜಾಲಖಾಸಗಿ ಕಂಪನಿಗಳು ಲಾಭಕ್ಕಿಂತ ರೈತರ ಹಿತಕ್ಕೇ ಹೆಚ್ಚಿನ ಒತ್ತು ನೀಡಲಿ: ಡಿ.ಸಿ. ರಾಮೇಗೌಡ

ಖಾಸಗಿ ಕಂಪನಿಗಳು ಲಾಭಕ್ಕಿಂತ ರೈತರ ಹಿತಕ್ಕೇ ಹೆಚ್ಚಿನ ಒತ್ತು ನೀಡಲಿ: ಡಿ.ಸಿ. ರಾಮೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಖಾಸಗಿ ಕಂಪನಿಗಳು ಕೇವಲ ಲಾಭದ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸದೆ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರ ಏಳಿಗೆಗೆ ಶ್ರಮಿಸ ಬೇಕು ಎಂದು ತಾಲೂಕು ಕೃಷಿಕ ಸಮಾಜದ ನಿರ್ದೇಶಕ ದೊಡ್ಡಕೊಪ್ಪಲು ಡಿ.ಸಿ. ರಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಏನ್ಜಾ ಜಯ್ಡೆನ್ ಕಂಪನಿ ವತಿಯಿಂದ ಮಹಾಬಲಿ ಸಿಹಿ ಕುಂಬಳದ ಕಾಯಿ ಬೆಳೆ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿತ್ತನೆ ಬೀಜಗಳು ರಸಗೊಬ್ಬರಗಳು ಕೀಟನಾಶಕಗಳು ಆಧುನಿಕ ಕೃಷಿಯೊಂದಿಗೆ ಗಾಢವಾಗಿ ಬೆಸೆದುಕೊಂಡಿದ್ದು ಖಾಸಗಿ ಕಂಪನಿಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ರೈತರಿಗೆ ಗುಣಮಟ್ಟದ ಸಾಮಗ್ರಿಗಳನ್ನು ವಿತರಿಸಿದರೇ ಕಂಪನಿಗಳು ಜನಮನ್ನಣೆ ಗಳಿಸಲು ಸಾಧ್ಯವಾಗುತ್ತದೆ ಎಂದರು.
ಕಂಪನಿಯ ಕ್ಷೇತ್ರ ಅಧಿಕಾರಿ ಜೈಪ್ರಕಾಶ್ ಮಾತನಾಡಿ ಈ ಕಾರ್ಯಕ್ರಮದ ಮೂಲಕ ಕಂಪನಿಯ ಬಿತ್ತನೆ ಬೀಜಗಳು ಮತ್ತು ಸಾಮಗ್ರಿಗಳು ಗುಣಮುಟ್ಟದಿಂದ ಕೂಡಿದ್ದು ರೈತರು ಭರವಸೆಯೊಂದಿಗೆ ನಮ್ಮ ಕಂಪನಿಯ ಬಿತ್ತನೆ ಬೀಜವನ್ನು ಖರೀದಿಸ ಬಹುದಾಗಿದ್ದು ಈ ಮೂಲಕ ರೈತರಿಗೆ ಕುಂಬಳ ಬೆಳೆಯ ನಿರ್ವಹಣೆ ಕುರಿತು ಸಮಗ್ರವಾಗಿ ಮಾಹಿತಿ ಒದಗಿಸಲಾಗುವುದು ಎಂದರು.

ಕ್ಷೇತ್ರೋತ್ಸವದ ಆಯೋಜಿಸಲಾಗಿದ್ದ ಮಹಾಬಲಿ ಕುಂಬಳ ಬೆಳೆದ ಹೊಸೂರಿನ ಹೆಚ್.ಡಿ. ಲೋಕೇಶ್ ಅವರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡೈರಿ ಮಾಜಿ ಅಧ್ಯಕ್ಷ ಸ್ವಾಮಿ,ಸುರೇಶ್, ವಕೀಲ ಸಾಲೇಕೊಪ್ಪಲು ಕುಮಾರ್ ಮುಖಂಡರಾದ ಎಚ್.ಎಲ್.ಶಶಾಂಕ್ ಗೌಡ , ಎಚ್.ಡಿ. ಸ್ವಾಮಿ ಪ್ರದೀಪ್, ರಾಮಲಿಂಗ, ಮದನ್,ಅರುಣ್, ಮಧು, ಶ್ರೀನಿವಾಸ್,ಅಜಯ್, ತೇಜಸ್, ದಿಲೀಪ್, ಪ್ರಜ್ವಲ್, ಮನು, ಉದ್ಯಮಿ ಸುದರ್ಶನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular