ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಖಾಸಗಿ ಆಸ್ಪತ್ರೆಗಳನ್ನು ನಡೆಸುವವರು ಲಾಭ ಗಳಿಸುವ ಉದ್ದೇಶವನ್ನು ಹೆಚ್ಚಾಗಿ ಮಾಡದೆ ಸಮಾಜ ಮುಖಿ ಕೆಲಸವನ್ನು ಮಾಡಿ ನೊಂದವರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ನವ ನಗರ ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಅರ್ಕನಾಥ ರಸ್ತೆಯಲ್ಲಿರುವ ಶರತ್ ಕಣ್ಣಿನ ಆಸ್ಪತ್ರೆ ವತಿಯಿಂದ ಹೊರ ತಂದಿರುವ
ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮೂರು ಸಾವಿರ ಮಂದಿಗೆ ಕಣ್ಣಿನ ಚಿಕಿತ್ಸೆ ಮಾಡುವ ಮೂಲಕ ಈ ಭಾಗದ ಜನರ ಆಶಾ
ಕಿರಣವಾಗಿರುವ ಆಸ್ಪತ್ರೆಯವರ ಕಾರ್ಯವೈಖರಿ ಇತರರಿಗೆ ಮಾದರಿ ಎಂದರು.
ಪ್ರತಿ ವರ್ಷ ಕೆಲವು ಮಂದಿ ಬಡವರನ್ನು ಗುರುತಿಸಿ ಅವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ
ನೀಡಬೇಕು ಎಂದು ಸಲಹೆ ನೀಡಿದ ಅವರು ಇಂತಹಾ ಕೆಲಸ ಮಾಡಿದರೆ ನಾನು ಬೆನ್ನೆಲುಬಾಗಿ ನಿಲ್ಲುತ್ತೇನೆ
ಎಂದು ಭರವಸೆ ನೀಡಿದರು.
ಆಸ್ಪತ್ರೆಯ ಮಾಲೀಕ ಡಾ.ಶರತ್ ಮಾತನಾಡಿ ಯಶಸ್ವಿನಿ ಕಾರ್ಡ್ ಹೊಂದಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉಚಿತವಾಗಿ ನೇತ್ರ ಚಿಕಿತ್ಸೆ ನಡೆಸಿ ಲೆನ್ಸ್ ಅಳವಡಿಸಲಿದ್ದು ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಂಬಾಕು ಮಾರುಕಟ್ಟೆ ನಿವೃತ್ತ ಅಧೀಕ್ಷಕ ಕೆ.ಎನ್.ದಿನೇಶ್‌ನಂಜಪ್ಪ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ನವ ನಗರ ಅರ್ಬನ್ಯ ಬ್ಯಾಂಕ್
ನಿರ್ದೇಶಕ ಕೇಶವ್, ಮುಖಂಡರಾದ ಸುರೇಶ್, ಶಮಂತ್, ಪುಟ್ಟರಾಜು, ನಾರಾಯಣ್ ಸೇರಿದಂತೆ
ಮತ್ತಿತರರು ಹಾಜರಿದ್ದರು.