Thursday, April 24, 2025
Google search engine

Homeರಾಜ್ಯಪ್ರಜ್ವಲ್ ಲೈಂಗಿಕ ಪ್ರಕರಣದಲ್ಲಿ ಮೋದಿ ಮೌನಕ್ಕೆ ಪ್ರಿಯಾಂಕಾ ಗಾಂಧಿ ತರಾಟೆ

ಪ್ರಜ್ವಲ್ ಲೈಂಗಿಕ ಪ್ರಕರಣದಲ್ಲಿ ಮೋದಿ ಮೌನಕ್ಕೆ ಪ್ರಿಯಾಂಕಾ ಗಾಂಧಿ ತರಾಟೆ

ನವದೆಹಲಿ: ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿಗಳು ಈ ನಾಯಕನ ಭುಜದ ಮೇಲೆ ಕೈ ಹಾಕಿ ಫೋಟೋಗೆ ಪೋಸ್ಟ್ ಕೊಟ್ಟಿದ್ದರು. ಚುನಾವಣೆಗೆ ೧೦ ದಿನದ ಹಿಂದೆ ಈ ನಾಯಕನ ಪರವಾಗಿ ಪ್ರಧಾನಿ ಪ್ರಚಾರಕ್ಕೆ ಹೋಗುತ್ತಾರೆ. ವೇದಿಕೆಯಲ್ಲಿ ಹಾಡಿ ಹೊಗಳುತ್ತಾರೆ. ಇವತ್ತು ಕರ್ನಾಟಕದ ಆ ನಾಯಕ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆ ವ್ಯಕ್ತಿಯ ಘೋರ ಅಪರಾಧಗಳ ಬಗ್ಗೆ ಕೇಳಿದರೇ ಸಾಕು ಹೃದಯ ನಡುಗುತ್ತದೆ. ಆ ವ್ಯಕ್ತಿ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆದರೂ ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular