Friday, April 18, 2025
Google search engine

Homeಸಿನಿಮಾಪ್ರಿಯಾಂಕಾ ಉಪೇಂದ್ರ ನಟನೆಯ ‘ಡಿಟೆಕ್ಟಿವ್‌ ತೀಕ್ಷ್ಣ’ ಟ್ರೇಲರ್ ಸದ್ದು

ಪ್ರಿಯಾಂಕಾ ಉಪೇಂದ್ರ ನಟನೆಯ ‘ಡಿಟೆಕ್ಟಿವ್‌ ತೀಕ್ಷ್ಣ’ ಟ್ರೇಲರ್ ಸದ್ದು

ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಡಿಟೆಕ್ಟಿವ್‌ ತೀಕ್ಷ್ಣ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಉಪೇಂದ್ರ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ಈ ಚಿತ್ರವನ್ನು ತ್ರಿವಿಕ್ರಮ ರಘು ನಿರ್ದೇಶಿಸಿದ್ದು, ಗುತ್ತ ಮುನಿಪ್ರಸನ್ನ, ಮುನಿವೆಂಕಟ್‌ ಚರಣ್‌ ಮತ್ತು ಪುರುಷೋತ್ತಮ್ .ಬಿ.ಕೊಯೂರು ನಿರ್ಮಿಸಿದ್ದಾರೆ.

ಟ್ರೇಲರ್‌ ರಿಲೀಸ್‌ ಮಾಡಿ ಮಾತನಾಡಿದ ಉಪೇಂದ್ರ, “ಡಿಟೆಕ್ಟಿವ್‌ ಪಾತ್ರ ಎಲ್ಲಾ ಹೆಂಗಸರಲ್ಲಿ ಇರುತ್ತೆ. ನನ್ನ ಮನೆಯಲ್ಲೂ ಆ ಪಾತ್ರವಿದೆ. ಪ್ರತಿಯೊಬ್ಬ ಪತಿಗೂ ಡಿಟೆಕ್ಟಿವ್‌ ಹೆಂಡತಿ ಇರುತ್ತಾರೆ. ಇದು ಪ್ರಿಯಾಂಕಾ ಅವರ 50ನೇ ಚಿತ್ರ. ನಾನಿನ್ನೂ 46ರಲ್ಲಿ ಇದ್ದೇನೆ. ಈ ಸಿನಿಮಾವು ಹಿಟ್‌ ಆಗಲಿ. ಒಟ್ಟಿಗೆ 100 ಸಿನಿಮಾಗಳಿಗೆ ಒಮ್ಮೆಗೆ ಸಹಿ ಹಾಕುವಂತೆ ಆಗಲಿ’ ಎಂದು ಶುಭ ಕೋರಿದರು.

“ನಾನು 50 ಸಿನಿಮಾಗಳಲ್ಲಿ ನಟಿಸಲು ಚಿತ್ರರಂಗ ಕಾರಣ. ನಿರ್ದೇಶಕರು, ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿರುವುದರಿಂದ ಇಷ್ಟೊಂದು ಸಿನಿಮಾ ಮಾಡಲಾಯಿತು. ಈ ಚಿತ್ರದಲ್ಲಿ ಪ್ರತಿಯೊಂದು ಅಂಶವನ್ನು ಕೇಳಿಕೊಂಡು ಮಾಡುತ್ತಿದ್ದೆ. ಎಲ್ಲಾ ಕಲಾವಿದರು ತುಂಬಾ ಆಸಕ್ತಿ ವಹಿಸಿ ನಟಿಸಿದ್ದಾರೆ. ಮಧ್ಯರಾತ್ರಿ 2 ಆದರೂ ನಾವೆಲ್ಲರೂ ಉಲ್ಲಾಸದಿಂದ ಕೆಲಸ ಮಾಡಿದ್ದೇವೆ. ಮಾನಸಿಕವಾಗಿ ಚುರುಕು ಇರುವ ರೋಲ್‌ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ಪ್ರಿಯಾಂಕಾ. ಉಳಿದಂತೆ ವಿಜಯ್‌ ಸೂರ್ಯ, ಸಿದ್ಲಿಂಗು ಶ್ರೀಧರ್‌ ಸೇರಿದಂತೆ ಚಿತ್ರತಂಡ ತಮ್ಮ ಅನಿಸಿಕೆ ಹಂಚಿಕೊಂಡರು.

RELATED ARTICLES
- Advertisment -
Google search engine

Most Popular