ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಷೇರುದಾರ ಸದಸ್ಯರ ಸಹಕಾರದಿಂದ ಕಲ್ಪವೃಕ್ಷ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವರ್ಷದಿಂದ ವರ್ಷಕ್ಕೆ ಲಾಭಾಂಶದಲ್ಲಿ ಪ್ರಗತಿ ಹೊಂದುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸಂಸ್ಥೆಯ 2023 – 24 ನೇ ಸಾಲಿನ ವಾರ್ಷಿಕ ಮಹಾಸಭೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಗ್ರಾಹಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು ಸದಸ್ಯರ ಉಳಿತಾಯ ಠೇವಣಿ, ಪಿಗ್ಮಿ ಠೇವಣಿ, ನಿಶ್ಚಿತ ಠೇವಣಿ ಮತ್ತು ಆವರ್ತ ಠೇವಣಿಗಳಿಂದ 2.37 ಕೋಟಿ ರೂ ಗಳನ್ನು ಸಂಗ್ರಹಿಸುವ ಮೂಲಕ ಉತ್ತಮ ವಹಿವಾಟು ನಡೆಸಿದ್ದು ಸದಸ್ಯರಿಗೆ ಜಾಮೀನು ವೈಯಕ್ತಿಕ ಸಾಲ ಮತ್ತು ಪಿಗ್ಮಿ ಸಾಲ ನೀಡಿ 2023 – 24 ನೇ ಸಾಲಿನಲ್ಲಿ 5.25 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ, ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಮುಂದಿನ ಸಾಲಿನೊಳಗೆ ಉದ್ಘಾಟನೆ ಆಗುವ ನಿರೀಕ್ಷೆಯಿದೆ, ಸಹಕಾರ ಸಂಘಗಳ ಸ್ಥಾಪನೆ ಸುಲಭ ಆದರೆ ಉತ್ತಮ ವಹಿವಾಟು ನಡೆಸಿ ಷೇರುದಾರ ಸದಸ್ಯರ ಹಿತ ಕಾಪಾಡುವುದು ಸವಾಲಿನ ಕೆಲಸವಾಗಿದೆ ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದಿಂದ ಸೊಸೈಟಿ ಉತ್ತಮ ಕೆಲಸ ನಿರ್ವಹಿಸುತ್ತಿದೆ ಎಂದರು.
ಸಂಸ್ಥೆಯ ಸಿಇಒ ಆರ್.ಮಂಜುನಾಥ್ 2023 – 24 ನೇ ಸಾಲಿನ ವಹಿವಾಟಿನ ಮಾಹಿತಿ ನೀಡಿದರು, ಉತ್ತಮ ವಹಿವಾಟು ನಡೆಸಿರುವ ಗ್ರಾಹಕರಿಗೆ ಮತ್ತು ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85 ಕ್ಕೂ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ಷೇರುದಾರರ ಮಕ್ಕಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್ ಕೃಷ್ಣೇಗೌಡ, ನಿರ್ದೇಶಕರಾದ ಬಿ.ಎ ಪ್ರಕಾಶ್, ಸಿ.ಆರ್ ದೇವರಾಜು, ಎಸ್.ಆರ್ ದಿನೇಶ್, ಕೆ.ಎಲ್ ಸುರೇಶ್, ಡಿ.ಆರ್ ಶಹಬಾಜ್, ಎ.ಪಿ ದಿನೇಶ್ ಕುಮಾರ್, ಶೃತಿ ಮಂಜುನಾಥ್, ಮಹೇಶ್ವರಿ, ಎಚ್.ಎಸ್ ಹರೀಶ್, ಬಿ.ಪಿ ರಾಜೇಶ್, ಕೆ.ಆರ್ ಕೆಂಪಣ್ಣ ಸಿಬ್ಬಂದಿ ಆರ್.ಚಿತ್ರ, ಹೆಚ್.ಎಂ ಆಶಾ, ಪಿ.ವಿ ಮಹದೇವ್, ಎಚ್.ಆರ್ ಮನು, ಪ್ರಿಯದರ್ಶಿನಿ, ಕುಮಾರಿ ಮತ್ತು ಸಂಘದ ಸದಸ್ಯರು ಇದ್ದರು.