ಪಿರಿಯಾಪಟ್ಟಣ: ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ನೂತನ ಉಪಾಧ್ಯಕ್ಷರಾಗಿ ಜಿ.ದೇವರಾಜ ಖಜಾಂಚಿಯಾಗಿ ಸಿ.ಮಂಜುನಾಥ್ ಅವಿರೋಧ ಆಯ್ಕೆಯಾದರು.
ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಜಿ.ದೇವರಾಜ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಸವಿತಾ ಅವಿರೋಧ ಆಯ್ಕೆ ಘೋಷಿಸಿದರು, ಇದೆ ವೇಳೆ ಖಜಾಂಚಿಯಾಗಿ ಸಿ.ಮಂಜುನಾಥ್ ಆಯ್ಕೆಯಾದರು, ನೂತನ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷ ಪಿ.ವಿ ದೇವರಾಜು, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹದೇವಪ್ಪ ಮತ್ತಿತರರು ಅಭಿನಂದಿಸಿದರು.
ನೂತನ ಉಪಾಧ್ಯಕ್ಷ ಜಿ.ದೇವರಾಜ ಹಾಗು ಖಜಾಂಚಿ ಸಿ.ಮಂಜುನಾಥ್ ಅವರು ಮಾತನಾಡಿ ನಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ಸಂಘವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುವ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಜಯಲಕ್ಷ್ಮಿ, ಶಾಮು, ಜಗದೀಶಾರಾದ್ಯ, ಗಿರೀಶ್, ಆರ್.ಮಹೇಶ್, ಪರಮಶಿವಯ್ಯ, ಕೆ.ಸುರೇಶ್, ರವಿಕುಮಾರ್, ಎಂ.ಜಿ ರೂಪ, ಕೆ.ಹೆಚ್ ನಾಗರಾಜು, ಸರ್ವಮಂಗಳ, ಸಿಇಓ ರವಿಕುಮಾರ್, ಸಿಬ್ಬಂದಿ ಗಣೇಶ್ ಇದ್ದರು.