ವರದಿ: ಸತೀಶ್ ಆರಾಧ್ಯ, ಪಿರಿಯಾಪಟ್ಟಣ
ಪಿರಿಯಾಪಟ್ಟಣ: ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ವಿಶ್ವ ಯೋಗ ದಿನ ಅಂಗವಾಗಿ
ಯೋಗಾಭ್ಯಾಸ ನಡೆಯಿತು.
ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಅಂಜನಾದ್ರಿ ಯೋಗ ಗ್ರೂಪ್ ಮತ್ತು ರೋಟರಿ ಪಿರಿಯಾಪಟ್ಟಣ ಐಕಾನ್ಸ್ ನ ಸಹಯೋಗದಲ್ಲಿ ಯೋಗ ಪ್ರದರ್ಶನ ನಡೆಯಿತು. ಯೋಗ ಶಿಕ್ಷಕರಾದ ಕೆಂಪರಾಜು, ದಾಸ್, ಮತ್ತು ಪತ್ರಕರ್ತ ನವೀನ್ ಕುಮಾರ್ ಯೋಗಭ್ಯಾಸ ಹೇಳಿಕೊಟ್ಟರು, ಮುರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು ಸೇರಿ 150 ಕ್ಕೂ ಹೆಚ್ಚು ಮಂದಿ ಯೋಗ ಮಾಡಿದರು.

ಈ ವೇಳೆ ವಕೀಲ ಜೆ.ಎಸ್ ನಾಗರಾಜು, ಬಿಜೆಪಿ ಅಧ್ಯಕ್ಷ ಕೊಪ್ಪ ರಾಜೇಂದ್ರ, ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಕೆ.ರಮೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು, ಹಿರಿಯ ಮಹಿಳಾ ಯೋಗ ಪಟು ಶೋಭಾ ಕುಡುವ, ಪುರಸಭೆ ಸದಸ್ಯ ಹೆಚ್.ಕೆ ಮಂಜುನಾಥ್, ಮೊರಾರ್ಜಿ ವಸತಿ ಶಾಲೆ ಶಿಕ್ಷಕ ಪುಟ್ಟಮಾದಯ್ಯ, ರಾಜೇಶ್ ಇದ್ದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಸುಧಾಕರ್ ಅವರು ಯೋಗದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, ಯೋಗ ಶಿಕ್ಷಕ ಕೆಂಪಣ್ಣ ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ಮಾಡಿದರು, ಈ ಸಂದರ್ಭ ಪ್ರಾಂಶುಪಾಲರಾದ ಕೆ.ಆರ್ ಪ್ರವೀಣ್, ಮುಖ್ಯ್ ಶಿಕ್ಷಕಿ ದಿವ್ಯ, ಉಪನ್ಯಾಸಕರಾದ ಕಿರಣ್, ಸ್ವಾಮಿಗೌಡ, ಮಹದೇವ್, ಸ್ವಾಮಿ, ಶ್ರೀನಿವಾಸ್, ಪ್ರೀತು, ಪಲ್ಲವಿ, ಸೌಮ್ಯಶ್ರೀ, ಬಿಂದು, ಪುಟ್ಟರಾಜು, ದಿನೇಶ್, ದೀಪ, ಯೋಗ ಶಿಕ್ಷಕರಾದ ಲಕ್ಷ್ಮಣ, ನೃತ್ಯ ನಿರ್ದೇಶಕ ಪ್ರಸನ್ನ ಮತ್ತಿತರಿದ್ದರು.
ಪಿರಿಯಾಪಟ್ಟಣ ತಾಲೂಕಿನ ಬೆಕ್ಕರೆ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆ ರೂಪ ಅವರ ಮಾರ್ಗದರ್ಶನದಲ್ಲಿ ಯೋಗಾಸನದ ವಿವಿಧ ಭಂಗಿ ಪ್ರದರ್ಶಿಸಿ ಪುಟಾಣಿಗಳು ಸಂತೋಷ ಪಟ್ಟರು, ಪುಟಾಣಿಗಳ ಯೋಗಭ್ಯಾಸ ಕಂಡ ಬೆಕ್ಕರೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು, ಈ ಸಂದರ್ಭ ಸಹಾಯಕಿ ಪಂಕಜ ಇದ್ದರು.

ಪಟ್ಟಣದ ಗೋಣಿಕೊಪ್ಪ ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಡೆದ ಯೋಗ ಅಭ್ಯಾಸದಲ್ಲಿ ಪುಷ್ಪ, ಬಾಲಕಿಯರ ಶಾಲೆ, ಎಸ್ ಸಿವಿಡಿಎಸ್, ಇಂದಿರಾ ಗಾಂಧಿ ವಸತಿ ಶಾಲೆಯ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗೇಶ್ ನೇತೃತ್ವದಲ್ಲಿ ದೈಹಿಕ ಶಿಕ್ಷಕರಾದ ರಮೇಶ್, ಪುಷ್ಪ ಶ್ರೀನಿವಾಸ್, ಚರಣ್, ಮಂಜುನಾಥ್, ನಟರಾಜ್, ನಾಗಯ್ಯ ಮಾರ್ಗದರ್ಶನದಲ್ಲಿ ಯೋಗಭ್ಯಾಸ ಮಾಡಿದರು.
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯ ಶಾಲಾ ಕಾಲೇಜುಗಳಲ್ಲಿಯೂ ಯೋಗಭ್ಯಾಸ ನಡೆಯಿತು.
