ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ೧೦ ಕೋಟಿರೂ. ವೆಚ್ಚದ ೯ ವಿವಿಧ ಕಾಮಗಾರಿಗಳಿಗೆ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಗುದ್ದಲಿ ಪೂಜೆ ನೇರವೇರಿಸಿದರು.
ತಾಲ್ಲೂಕಿನ ಹಳೆಯೂರು, ಹಸುವಿನಕಾವಲು, ಚಿಕ್ಕನೇರಳೆ, ಬೆಣಗಾಲು, ಅಂಬ್ಲಾರೆ, ಮರಟಿಕೊಪ್ಪಲು ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದಅವರು ಮರಟಿಕೊಪ್ಪಲುಗ್ರಾಮದಲ್ಲಿ ೩ ಕಿ.ಮೀ. ರಸ್ತೆಗೆ ಮೆಟ್ಲಿಂಗ್ ಹಾಗೂ ಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡಲು ೨.೫ ಕೋಟಿ ಬಿಡುಗಡೆ ಮಾಡಲಾಗಿದೆ. ಇದೇರೀತಿಎಲ್ಲಾ ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದರಿಂದ ಬಡವರು ನೆಮ್ಮದಿಯಾಗಿ ಬದುಕುತ್ತಿದ್ದಾರೆ.
ಚಾಮುಂಡೇಶ್ವರಿಕೃಪೆಯಿಂದ ಈ ಬಾರಿರಾಜ್ಯದಲ್ಲಿ ಮಳೆ ಚೆನ್ನಾಗಿ ಬಂದಿರುವುದರಿಂದಕೆರೆಕಟ್ಟೆ, ನದಿ, ಅಣೆಕಟ್ಟುಗಳು ತುಂಬು ಹರಿಯುತ್ತಿವೆ. ಇದರಿಂದಜನ ಜಾನುವಾರುಗಳಿಗೆ, ರೈತರುಗಳಿಗೆ ಅನುಕೂಲವಾಗಿದೆಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಲೈನ್‌ಮೆನ್‌ಗಳು ಸರಿಯಾಗಿ ಸ್ಪಂದಿಸದೆ ಉದಾಸೀನ ಉತ್ತರವನ್ನು ನೀಡುತ್ತಾರೆ, ರಸ್ತೆ ಬೇಕು ಚರಂಡಿ ನಿರ್ಮಾಣವಾಗಬೇಕು. ಶಾಲಾ ಆವರಣದಲ್ಲಿಜೂಜಾಡುತ್ತಿದ್ದಾರೆ ಅವರುಗಳ ವಿರುದ್ಧಕ್ರಮ ತೆಗೆದುಕೊಳ್ಳಬೇಕು.
ಮರದಿಂದ ತೊಂದರೆಯಾಗಿದೆ ತೆಗೆಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರುಅಲ್ಲೇಇದ್ದ ಅಧಿಕಾರಿಗಳಿಗೆ ಸಾರ್ವಜನಿಕರು ಹೇಳಿದ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡುಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಹಮತ್‌ಜಾನ್ ಬಾಬು, ನೀರಾವರಿ ಇಲಾಖೆಯ ಸೂಪರಿಂಡೆಂಟ್ ಇಂಜಿನಿಯರ್ ರಘುಪತಿ, ಇ.ಇ. ಪುಟ್ಟಸ್ವಾಮಿ, ಆರ್.ಎಫ್.ಓ. ಪದ್ಮಶ್ರೀ ಎನ್., ತಹಸೀಲ್ದಾರ್ ನಿಸರ್ಗಪ್ರಿಯ, ಇ.ಓ. ಸುನೀಲ್‌ಕುಮಾರ್, ಬಿ.ಇ.ಓ., ರವಿಪ್ರಸನ್ನ, ಜೆ.ಇ. ದಿನೇಶ್, ಬೈಲಕುಪ್ಪೆಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಕೆ. ದೀಪಕ್, ಮುಖಂಡರಾದ ಕಾಂಗ್ರೆಸ್ ಕಾರ್ಯದರ್ಶಿ, ಸಾಲುಕೊಪ್ಪಲು ಪುಟ್ಟರಾಜು, ಶೇಖರ್, ಈಚೂರು ಲೋಕೇಶ್, ಆಸ್ವಾಳ್ ಶಫಿ, ಅಸ್ಲಾಮ್ ಮತ್ತಿತರರು ಹಾಜರಿದ್ದರು.