ಮೈಸೂರು: ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಅಥರ್ವ ಲೈಫ್ ಸ್ಕಿಲ್ಸ್
ಫೌಂಡೇಶನ್ ವತಿಯಿಂದ ಆಯೋಜಿಸಿದ ಭಾರತದ ಧ್ವಜ ಹಾಗೂ ಸ್ವಾತಂತ್ರ ಹೋರಾಟಗಾರರ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆಯ 50ಕ್ಕೂ ಹೆಚ್ಚು ಮಕ್ಕಳು ಸ್ಪರ್ಧಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದ
ಎಲ್ ಕೆ ಜಿ ವಿಭಾಗ ಮೊದಲನೇ, ಸುದ್ದಿ ಮುಕ್ತಕ, ದ್ವಿತೀಯ ಈಶನ ಬಿ ಗೌಡ,
1ನೇ ತರಗತಿಯಿಂದ 3ನೇ ತರಗತಿಯ ವಿಭಾಗದ ಮೊದಲನೇ ಬಹುಮಾನ ತನ್ವಿ ಎಸ್ ಪಿ, ದ್ವಿತೀಯ ವಿಶಾಲ್ ಆರ್ ಗೌಡ, ತೃತೀಯ ಆರ್ಣ ಎಂ ಎ, 4ನೇ ತರಗತಿಯಿಂದ 6ನೇ ತರಗತಿಯ ವಿಭಾಗದಲ್ಲಿ ಮೊದಲನೇ ಬಹುಮಾನ ಧೀರಜ್, ದ್ವಿತೀಯ ಬಹುಮಾನ ಅದ್ವೈತ ಜಿ, ತೃತೀಯ ಬಹುಮಾನ ವಿಪ್ರತ,
7ನೇ ತರಗತಿಯಿಂದ 8ನೇ ತರಗತಿ ವಿಭಾಗದಲ್ಲಿ ವಿಜೇತರಾದ ನಿತ್ಯಕ್ಲಿನ ಶಿಲ್ಪ ರವರಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ನಂತರ ಮಾತನಾಡಿದ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ
ದೇಶದ ಸ್ವಾತಂತ್ರ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ, ತ್ಯಾಗ ಮತ್ತು ಬಲಿದಾನ ಅರಿತಾಗ ದೇಶದ ಬಗ್ಗೆ ಪ್ರೀತಿ ಮೂಡುತ್ತದೆ ಎಂದರು.
ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಹೋರಾಟಗಾರರನ್ನು ನೆನೆದು ಅವರ ಆಶಯ ಈಡೇರಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ, ರುಕ್ಮಿಣಿ, ಮೇನಕ, ಲಾವಣ್ಯ, ಅನುಷಾ, ಸನತ್, ಚಾರುಲತಾ ಪ್ರಿಯಾಂಕ ಹಾಗೂ ಇನ್ನಿತರರು ಹಾಜರಿದ್ದರು