Thursday, September 25, 2025
Google search engine

Homeರಾಜ್ಯಸುದ್ದಿಜಾಲಸಹಕಾರ ಸಂಘಗಳಲ್ಲಿ ರಾಜಕೀಯಕ್ಕೂದ್ದಕ್ಕೂ ರೈತ ಪರ ಸೇವೆ ಅಗತ್ಯ: ದೊಡ್ಡಸ್ವಾಮೇಗೌಡ

ಸಹಕಾರ ಸಂಘಗಳಲ್ಲಿ ರಾಜಕೀಯಕ್ಕೂದ್ದಕ್ಕೂ ರೈತ ಪರ ಸೇವೆ ಅಗತ್ಯ: ದೊಡ್ಡಸ್ವಾಮೇಗೌಡ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್‌.ನಗರ : ಸಹಕಾರ ಸಂಘಗಳ ಮೂಲ ಉದ್ದೇಶ ಈಡೇರಬೇಕಾದರೆ ಅವುಗಳಲ್ಲಿ ರಾಜಕೀಯ ಬಳಸದೆ ರೈತ‌ರ ಪರವಾಗಿ ಪ್ರಾಮಾಣಿಕವಾದ ಕೆಲಸ ಮಾಡಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು ಸಂಘದ ಆಡಳಿತ ಂ ಮಂಡಳಿಯವರು ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಕಳೆದ 3 ವರ್ಷಗಳಿಂದ ಎಂಸಿಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೃಷಿ ಪತ್ತಿನ ಸಹಕಾರ ಸಂಘಗಳ ಹೊಸ ರೈತ ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಕಾರಣ ನಬಾರ್ಡ್ ಬ್ಯಾಂಕ್ ನಿಂದ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿಸಿದ ಅವರು ನಮ್ಮ ಆಡಳಿತ ಮಂಡಳಿ ಅಸ್ಥಿತಕ್ಕೆ ಬಂದ ನಂತರ ಮುಖ್ಯ ಮಂತ್ರಿಗಳು ಮತ್ತು ಉಪವಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಾಲ ಕೊಡಿಸುತ್ತೇನೆಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಸಿ.ವೈ. ಅಭಿಲಾಷ್ ಮಾತನಾಡಿ ಪ್ರಸ್ತುತ ನಮ್ಮ ಸಂಘ 5.20 ಲಕ್ಷ ಲಾಭದಲ್ಲಿದ್ದು ಮುಂದಿನ ಸಾಲಿಗೆ ಅದನ್ನು ದ್ವಿಗುಣ ಮಾಡುವುದರ ಜತೆಗೆ ಸಾಲದ ಮೊತ್ತವನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗತ್ತದೆಂದು ತಿಳಿಸಿದರು.

ಈವರೆಗೆ ನಾವು ರೈತ ಸದಸ್ಯರಿಗೆ ವಿವಿದ ಬಾಬತ್ತುಗಳಡಿ 6 ಕೋಟಿ ಸಾಲ ವಿತರಣೆ ಮಾಡಿದ್ದು ಅದರ ಪ್ರಮಾಣದವನ್ನು ಹೆಚ್ಚು ಮಾಡಲು ಪ್ರಾಮಾಣಿಕವಾಗಿ ಕೆಲಸ‌ ಮಾಡುತ್ತೇವೆ ಎಂದು ಭರವಸೆ ನೀಡಿದ ಅವರು ಸಂಘಕ್ಕೆ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಅಕ್ಟೋಬರ್ ತಿಂಗಳಿನಲ್ಲಿ ಸದಸ್ಯತ್ವ ಅಭಿಯಾನ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.

ರೈತರ ನಿರೀಕ್ಷೆಗೆ ತಕ್ಕಂತೆ ಆಡಳಿತ ಮಂಡಳಿಯವರು ಕೆಲಸ ಮಾಡಬೇಕಾದರೆ ವೈಯುಕ್ತಿಕ ಹಿತಾಸಕ್ತಿಯನ್ನು ಮರೆತು ಸಂಘದ ಧ್ಯೇಯ ಮತ್ತು ಉದ್ದೇಶಗಳಿಗೆ ಕೆಲಸ ನಿರ್ವಹಿಸಬೇಕೆಂದ ಅವರು ನನಗೆ ರೈತ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಆಡಳಿತ ಮಂಡಳಿಯರು ಅಗತ್ಯ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ನೀಡಬೇಕೆಂದು ಕೋರಿದರು.

ಈವರೆಗೆ ಸಂಘದ ವತಿಯಿಂದ ಬೆಳೆ ಮತ್ತು ಗೊಬ್ಬರದ ಸಾಲ ನೀಡುತ್ತಿದ್ದು ಭವಿಷ್ಯದಲ್ಲಿ ಅಗತ್ಯ ಸಾಲ ಮತ್ತು ಬಿತ್ತನೆ ಬೀಜಗಳನ್ನು ವಿತರಣೆ ಮಾಡುವುದೊಂದಿಗೆ ಸಂಘದ ವ್ಯಾಪ್ತಿಯ ಗ್ರಾಮಗಳಲ್ಲಿ ಪಡಿತರ ವಿತರಣೆ ಮಾಡಲು ಚಿಂತಿಸಿದ್ದೇವೆ ಎಂದರು. ಈ ಸಂರ್ಧಭದಲ್ಲಿ ವಿವಿಧ ಸ್ರೀ ಶಕ್ತಿ ಸಂಘಗಳಿಗೆ ಸಂಘದ ವತಿಯಿಂದ 45 ಲಕ್ಷ ರೂಗಳ ಸಾಲದ ಚೆಕ್ ಗಳನ್ನು ದೊಡ್ಡಸ್ವಾಮೇಗೌಡ ಮತ್ತು ಸಿ.ವೈ.ಅಭಿಲಾಷ್ ವಿತರಣೆ ಮಾಡಿದರು.

ಸಂಘದ ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರಾದ ಉಷಾ, ಸಿ.ಹೆಚ್.ಕುಮಾರ್, ಚಲುವಯ್ಯ, ಸಿ.ಜಿ.ತಮ್ಮೇಗೌಡ, ಪುಟ್ಟೇಗೌಡ, ವೈ.ಎಸ್.ನಟರಾಜ್, ಸಿ.ಕೆ.ಮಲ್ಲಿಕಾರ್ಜುನ, ಎಂ.ಎಸ್.ರೂಪ, ಸೈಯದ್ ಇಸ್ರಾರ್, ಸಿ.ಆರ್.ರಘುನಾಥ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಓ ಮಂಜುನಾಥ್, ರೈತ ಮುಖಂಡರಾದ ಸಿ.ಬಿ.ಮಲ್ಲಿಕಾರ್ಜುನ, ರವೀಂದ್ರ, ಎ.ಟಿ.ಮಂಜು, ಚಂದ್ರೇಗೌಡ, ಸಿ.ಪಿ.ಪ್ರಕಾಶ್, ರವಿ, ಕಾಂತರಾಜು, ನಾಗರಾಜು, ಹರೀಶ್, ವಿ.ಚಂದ್ರು, ನರಸಿಂಹ, ವೈ.ಎಸ್.ಸುಂದ್ರ‌ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular