Wednesday, April 9, 2025
Google search engine

Homeರಾಜ್ಯಸುದ್ದಿಜಾಲಜುಲೈ 21ರಂದು ಜಪಾನ್’ನಲ್ಲಿ ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉಪನ್ಯಾಸ

ಜುಲೈ 21ರಂದು ಜಪಾನ್’ನಲ್ಲಿ ಮೈವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉಪನ್ಯಾಸ

ಮೈಸೂರು: ಜಪಾನ್’ನ ಹೊಕ್ಕೈಡೋ ವಿಶ್ವವಿದ್ಯಾಲಯದ ಪಬ್ಲಿಕ್ ಲೆಕ್ಚರ್ಸ್ ಕಮಿಟಿ, ಫ್ಯಾಕ್ಯುಲ್ಟಿ ಹೆಲ್ತ್ ಸೈನ್ಸ್ ವಿಭಾಗ ಆಯೋಜಿಸಿರುವ 2ನೇ ಹೆಲ್ತ್ ಸೈನ್ಸ್ ಸೆಮಿನಾರ್ ನಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಪಾಲ್ಗೊಂಡು ಉಪಪನ್ಯಾಸ ನೀಡಲಿದ್ದಾರೆ.

ಜುಲೈ 21ರಂದು ನಡೆಯಲಿರುವ ವಿಚಾರಗೋಷ್ಠಿಯಲ್ಲಿ ‘‘ಆಲ್ಝೈಮರ್ ಖಾಯಿಲೆ ಹಾಗೂ ಕ್ಯಾನ್ಸರ್ : ವೃದ್ಧಾಪ್ಯದ ರೋಗಗಳು ಹಾಗೂ ಪರಿಹಾರಗಳು’’ ಕುರಿತು ಪ್ರೊ.ಕೆ.ಎಸ್.ರಂಗಪ್ಪಅವರು ಮಾತನಾಡಲಿದ್ದಾರೆ.

ಪ್ರೊ.ಕೆ.ಎಸ್.ರಂಗಪ್ಪಅವರು ಆಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ ಔಷಧ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಈ ಕುರಿತು ಹೊಕ್ಕೈಡೋ ವಿಶ್ವವಿದ್ಯಾಲಯದ ಫ್ಯಾಕ್ಯುಲ್ಟಿ ಹೆಲ್ತ್ ಸೈನ್ಸ್ ವಿಭಾಗ ಆಯೋಜಿಸಿರುವ ಸೆಮಿನಾರ್ ನಲ್ಲಿ ಮಾತನಾಡಲಿದ್ದಾರೆ. ಜತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಡೀ ಪ್ರಪಂಚವನ್ನು ಕಾಡುತ್ತಿರುವ ವೃದ್ಧಾಪ್ಯದಲ್ಲಿ ಬರುವ ಆಲ್ಝೈಮರ್ ಖಾಯಿಲೆ ಹಾಗೂ ಕ್ಯಾನ್ಸರ್ ರೋಗಕ್ಕೆ ಔಷಧ ಕುರಿತು ಸಂಶೋಧನೆ ನಡೆಸಿರುವ ರಂಗಪ್ಪ ಅವರು ಈ ಕುರಿತು ಸೆಮಿನಾರ್ ನಲ್ಲಿ ಮಾತನಾಡಲಿದ್ದಾರೆ. ‘ಆಲ್ಝೈಮರ್ ಖಾಯಿಲೆ ಹಾಗೂ ಕ್ಯಾನ್ಸರ್’ಗೆ ಔಷಧ ಸಂಶೋಧನೆಯಲ್ಲಿ ರಸಾಯನಶಾಸ್ತ್ರಜ್ಞರ ಪಾತ್ರ ಕೇಂದ್ರೀಕರಿಸಿ ಹಲವಾರು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಕಿರಿಯ ವಯಸ್ಸಿನ ಜನರನ್ನೇ ಈ ಆಲ್ಝೈಮರ್ ಖಾಯಿಲೆ ಕಾಡಲು ಆರಂಭಿಸಿದೆ. ಇನ್ನು ಕ್ಯಾನ್ಸರ್ ನಿಂದ ಸಾಕಷ್ಟು ಸಾವುಗಳು ಪ್ರಪಂಚದಾದ್ಯಂತ ಸಂಭವಿಸುತ್ತಿವೆ. ಈ ಕುರಿತ ಸಂಭವನೀಯ ಚಿಕಿತ್ಸೆ ಮತ್ತಿತರ ವಿಷಯಗಳ ಕುರಿತು ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಲಿದ್ದಾರೆ.

RELATED ARTICLES
- Advertisment -
Google search engine

Most Popular