ಮದ್ದೂರು: ಪಟ್ಟಣದ ಮಳವಳ್ಳಿ ಮದ್ದೂರು ರಸ್ತೆಯಲ್ಲಿರುವ ಪ್ರೊ. ನಂಜುಂಡಸ್ವಾಮಿ ಪ್ರತಿಮೆಗೆ ರೈತ ಮುಖಂಡರು ಪೂಜೆ ಸಲ್ಲಿಸಿ ಹುತಾತ್ಮ ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ನವಿಲುಗುಂದ ನಲಗುಂದದಲ್ಲಿ ಪ್ರತಿಭಟನೆಯ ಖವು ಅತಿ ಹೆಚ್ಚಾಗಿ ಆ ಸಂದರ್ಭದಲ್ಲಿ ಹಲವಾರ ತ್ಯಾಗ ಬಲಿದಾನದಿಂದಾಗಿ ಪ್ರಾಣ ತ್ಯಾಗ ಮಾಡಿದ ರೈತರನ್ನು ನೆನೆಯುವ ಈ ದಿನ ನಮ್ಮ ಸುದಿನ ಎಂದು ರೈತ ಮುಖಂಡ ಸೋಶಿ ಪ್ರಕಾಶ್ ತಿಳಿಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕುದರಗುಂಡಿ ನಾಗರಾಜ್ ರೈತರ ಹಲವು ಸಮಸ್ಯೆಗಳನ್ನ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಶೀಘ್ರವಾಗಿ ಬಗೆಹರಿಸಬೇಕು ರೈತರಿಗೆ ಬರ ಪರಿಹಾರದ ಹಣವನ್ನು ಶೀಘ್ರವಾಗಿ ನೀಡಬೇಕು, ರೈತರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಗೌರವಿತವಾಗಿ ನಡೆಸಿಕೊಳ್ಳಬೇಕು, ನಂಜುಂಡಸ್ವಾಮಿ ಪ್ರತಿಮೆ ಮುಂಭಾಗ ದೋಸ್ತಿತಿಯಲ್ಲಿ ಇರುವ ವಿದ್ಯುತ್ ಕಂಬವನ್ನು ಬದಲಿಸಿ ಹೊಸ ಕಂಬವನ್ನು ಅಳವಡಿಸಬೇಕು,
ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಐದು ರೂಪಾಯಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಪ್ರಾಥಮಿಕ ಗ್ರಾಮಾಂತರ ಸರ್ಕಾರಿ ಆಸ್ಪತ್ರೆ ಗಳಿಗೆ 24*7 ರಾತ್ರಿ ಸಮಯದಲ್ಲಿ ವೈದ್ಯರನ್ನು ನೇಮಿಸಬೇಕು, ವಿವಿಧ ಇಲಾಖೆಗಳಲ್ಲಿರುವ ಹಲವು ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಮುಖಂಡರಾದ ರಾಮಕೃಷ್ಣಯ್ಯ ಅಣ್ಣೂರು ಮಹೇಂದ್ರ, ಕೀಳಗಟ್ಟ ನಂಜುಂಡಯ್ಯ, ಸೊಸಿ ಪ್ರಕಾಶ್, ಉಮೇಶ್, ಶಿವರಾಮ, ವಿಸಿ ಉಮಾಶಂಕರ್ ಸೇರಿದಂತೆ ಇತರರು ಹಾಜರಿದ್ದರು.