ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳ ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದ್ರೆ ಕಾಂಗ್ರೆಸ್ ಐದನೇ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ಜೋರಾಗಿರುವ ಹೊತ್ತಿನಲ್ಲೇ ಜೆಡಿಎಸ್‌ಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಇಂದು ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜಿ.ಟಿ ದೇವೇಗೌಡ ಅವರ ಪುತ್ರ ಜಿ.ಡಿ ಹರೀಶ್ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ನಮ್ಮ ಎಲ್ಲ 18 ಶಾಸಕರೂ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ತಂದೆಯವರ ಜೊತೆ ನಾನು ಮಾತಾಡಿಲ್ಲ. ಆದ್ರೆ ತಂದೆಯವರ ಮತದ ಬಗ್ಗೆ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ ಅಂತ ನಮ್ಮ ಕಾರ್ಯಕರ್ತರು ನನಗೆ ಕರೆ ಮಾಡಿ ಹೇಳಿದ್ರು. ಖಂಡಿತಾ ಅವರು ಜೆಡಿಎಸ್‌ಗೇ ಮತ ಹಾಕಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ 18 ಶಾಸಕರ ಮತ ನಮ್ಮ ಅಭ್ಯರ್ಥಿಗೇ ಹೋಗಿದೆ, ನಮ್ಮಪ್ಪನ ಬಗ್ಗೆ ಅನುಮಾನ ವ್ಯಕ್ತಪಡಿಸೋದು ಏನಿಲ್ಲ ಎಂಬುದು ನನ್ನ ಭಾವನೆ. ಜಿಟಿ ದೇವೇಗೌಡರ ಜೊತೆ ನಮ್ಮೆಲ್ಲ ವರಿಷ್ಠರು ಚರ್ಚೆ ಮಾಡಿದ್ದಾರೆ. ಅವರೇ ಹೇಳಿಕೆ ಕೊಟ್ಟ ಮೇಲೆ ಈ ಪ್ರಶ್ನೆ ಉದ್ಬವವಾಗೋದಿಲ್ಲ. ನಾವೆಲ್ಲ 18 ಶಾಸಕರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ನುಡಿದರು.
.



