ಸಾಲಿಗ್ರಾಮ ತಾಲ್ಲೋಕಿನ ಸಕ್ಕರೆ ಗ್ರಾಮದ ಕಾವೇರಿ ನದಿಯಿಂದ ಚಾಮರಾಜ ಅಣೆಕಟ್ಟೆಯ ಬಲದಂಡಾ ನಾಲೆಯ ಕ್ರಸ್ಟ್ ಗೇಟ್ ಗಳನ್ನು ತಿರುಗಿಸುವ ಮೂಲಕ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೊಸೂರು : ತರಕಾರಿ ಬೆಳೆಗಾರರ ಹಿತಕಾಯಲು ರೈತರು ಬೆಳೆದ ತರಕಾರಿಗಳನ್ನು ಸಂಗ್ರಹಣ ಮಾಡಿಟ್ಟುಕೊಳ್ಳಲು ಶಿಥಿಲೀಕರಣ ಘಟಕಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲ್ಲೋಕಿನ ಸಕ್ಕರೆ ಗ್ರಾಮದ ಕಾವೇರಿ ನದಿಯಿಂದ ಚಾಮರಾಜ ಅಣೆಕಟ್ಟೆಯ ಬಲದಂಡಾ ನಾಲೆಯ ಕ್ರಸ್ಟ್ ಗೇಟ್ ಗಳನ್ನು ತಿರುಗಿಸುವ ಮೂಲಕ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತರಕಾರಿ ಸಂಗ್ರಹದ ಶಿಥಿಲೀಕರಣ ಘಟಕ ಶೀಘ್ರವಾಗಿ ಮಂಜೂರಾದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಹಾಗೂ ಈ ಶೀಥಲೀಕರಣ ಘಟಕವನ್ನು ಅವಳಿ ತಾಲ್ಲೋಕಿನ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ನಿರ್ಮಾಣವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಗುಣಮಟ್ಟದ ಭಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಸೂಕ್ತ ಕ್ರಮಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದರು. ದೈವ ಕೃಪೆಯಿಂದ ಈ ಬಾರಿ ಬರ ಆವರಿಸುತ್ತದೆ ಎಂಬ ಭಯದ ನಡುವೆ ಉತ್ತಮ ಮಳೆಯಾಗುತ್ತಿದ್ದು ಕಾವೇರಿ ಮೈದುಂಬಿದ ಪರಿಣಾಮ ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಮೊದಲು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ನಾಲೆಗಳಿಗೆ ನೀರು ಹರಿಸಲಾಗುತ್ತಿದೆ ನಂತರ ಬೆಳೆ ಬೆಳೆಯಲು ನೀರನ್ನು ಬಿಡಲಾಗುವುದು ನಾಲೆಯ ವ್ಯಾಪ್ತಿಯ ರೈತರು ನೀರನ್ನು ಸದ್ಬಳಕೆ ಮಾಡಬೇಕು ಎಂದರು.
ಕ್ಷೇತ್ರದ ವ್ಯಾಪ್ತಿಯ ಕಟ್ಟೆಪು,ಮಿರ್ಲೇಶ್ರೇಣಿ,ಕೃಷ್ಣರಾಜನಗರ ಉಪನಾಲೆ ಸೇರಿದಂತೆ ಎಲ್ಲಾ ನಾಲೆಗಳನ್ನು ಸ್ವಚ್ಚಗೊಳಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು ಶೀಘ್ರ ನೀರಾವರಿ ಇಲಾಖೆಯ ಅಧಿಕಾರಿಗಳ
ಸಭೆ ಮಾಡಿ ಅವಳಿ ತಾಲ್ಲೋಕಿನ ಎಲ್ಲಾ ನಾಲೆಗಳಿಗೂ ನೀರು ಹರಿಸಲಾಗುವುದು ಎಂದು ರೈತರಿಗೆ ತಿಳಿಸಿದರು.
ಇದಕ್ಕೂ ಮೊದಲು ತಮ್ಮ ಪತ್ನಿ ಸುನಿತಾ ಅವರೊಂದಿಗೆ ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್,ಕುರುಬರ ಸಂಘದ ಅಧ್ಯಕ್ಷ ಚಿರ‍್ನಹಳ್ಳಿಶಿವಣ್ಣ,ಮುಖಂಡರಾದ ದಿಡ್ಡಹಳ್ಳಿಬಸವರಾಜು,ಎಲ್‌ಐಸಿಜಗದೀಶ,ಹಾಡ್ಯಮಹೇಶ,ಚಿಬುಕಹಳ್ಳಿಬಸವರಾಜು,ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ,ಉಪಾಧ್ಯಕ್ಷೆ ಯಶೋಧ, ಮಾಜಿ ಉಪಾಧ್ಯಕ್ಷ ಮಹದೇವ್
ಸದಸ್ಯರಾದ ಗೌಡಯ್ಯ,ನೂತನ್,ಮಾಜಿ ಸದಸ್ಯ ಮಲ್ಲಿಕಾರ್ಜುನ, ಕುರುಬರಪಡೆ ಅಧ್ಯಕ್ಷೆ ಸರಿತಾಜವರಪ್ಪ ಸಾಲಿಗ್ರಾಮ ಹಾರಂಗಿ ವಿಭಾಗದ ಇಇ ಈರಣ್ಣ,ನಂ.೫ ನೀರಾವರಿ ಇಲಾಖೆಯ ಎಇಇ ಗುರುರಾಜ್,ಹೊಸೂರು ವಿಭಾಗದ ಎಇಇ ಈಶ್ವರ್,ಇಂಜಿನಿಯರ್ ಗಳಾದ ಅಯಾಜ್‌ಪಾಷ,ಕಿರಣ್‌ಕುಮಾರ್, ಪ್ರತಾಪ್‌ಸೋಗೆ, ಕನ್ನಿಕಾ, ಬಿಂದು,ಅವಿನಾಶ್ ಇದ್ದರು.